ಮುಂಬೈ: ನೀರಿನಿಂದ ಮಿಂಚಿನ ವೇಗದಲ್ಲಿ ಜಿಗಿದು ಹೆಬ್ಬಾವು ಜಿಂಕೆಯನ್ನು ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಶಾಂತ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೀರಿನಿಂದ ಶರವೇಗದಲ್ಲಿ ಬಂದು ಚಿಂಕೆಯನ್ನು ಹೆಬ್ಬಾವು ಬೇಟೆಯಾಡುವುದನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Advertisement
One of the clip from E surveillance Video of Central Chanda Division from Maharashtra. When pythons kill prey, they use a kind of ambush technique by jumping & striking the prey, grabbing it with their teeth in around 50 milliseconds only. ( Humans take 200ms to blink an eye). pic.twitter.com/e0jPrz1hVx
— Susanta Nanda (@susantananda3) November 21, 2019
Advertisement
ಈ ವಿಡಿಯೋದಲ್ಲಿ ಮೊದಲಿಗೆ ನಾಲ್ಕು ಜಿಂಕೆಗಳು ನೀರು ಕುಡಿಯಲು ಒಂದು ಕೊಳದ ಬಳಿ ಬರುತ್ತವೆ. ಅದರಲ್ಲಿ ಎರಡು ಜಿಂಕೆ ಸುಮ್ಮನೆ ನಿಂತರೆ ಇನ್ನೆರಡು ಜಿಂಕೆ ನೀರು ಕುಡಿಯಲು ಬಗ್ಗುತ್ತವೆ. ಇದನ್ನೇ ನೀರಿನ ಒಳಗೆ ಕಾದು ಕುಳಿತ್ತಿದ್ದ ಹೆಬ್ಬಾವು ಶರವೇಗದಲ್ಲಿ ಜಿಗಿದು ಜಿಂಕೆಯ ಕತ್ತಿನ ಭಾಗವನ್ನು ಹಿಡಿದುಕೊಂಡು ನಂತರ ಸಂಪೂರ್ಣ ದೇಹವನ್ನು ಸುತ್ತಿಕೊಂಡು ನೀರಿನೊಳಗೆ ಎಳೆದುಕೊಳ್ಳುತ್ತದೆ.
Advertisement
ಈ ಭಯಾನಕ ವಿಡಿಯೋವನ್ನು ಶೇರ್ ಮಾಡಿರುವ ಸುಸಂತಾ ನಂದಾ ಅವರು, ಈ ವಿಡಿಯೋವನ್ನು ಮಹಾರಾಷ್ಟ್ರ ಅರಣ್ಯ ಪ್ರದೇಶದ ಚಂದಾ ವಿಭಾಗದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಹೆಬ್ಬಾವು ಬೇರೆ ಪ್ರಾಣಿಗಳ ತರ ಹೊಂಚುಹಾಕಿ ಬೇಟೆಯಾಡಿರುವುದು ವಿಶೇಷ. ನೀರಿನಲ್ಲಿ ಇದ್ದ ಹೆಬ್ಬಾವು ಕೇವಲು 50 ಮಿಲಿಸೆಕೆಂಡುಗಳಲ್ಲಿ ನೀರಿನಿಂದ ಜಿಗಿದು ತನ್ನ ಬೇಟೆಯನ್ನು ಹಿಡಿಯುತ್ತದೆ. ಮಾನವ ಕಣ್ಣು ಮಿಟುಕಿಸಲು 200 ಮಿಲಿಸೆಕೆಂಡ್ ತೆಗೆದುಕೊಳ್ಳುತ್ತಾನೆ ಎಂದು ಬರೆದುಕೊಂಡಿದ್ದಾರೆ.
Advertisement
OMG! Never knew pythons could strike like this!
Scary!
— Eagle eye (@eagle_mist) November 22, 2019
ಈ ವಿಡಿಯೋವನ್ನು ನಂದಾ ಅವರು ಪೋಸ್ಟ್ ಮಾಡಿದ ನಂತರ ಹಲವಾರು ನೆಟ್ಟಿಗರು ಕಮೆಂಟ್ ಮಾಡಿದ್ದು, 16 ಸಾವಿರ ಜನ ವಿಡಿಯೋವನ್ನು ನೋಡಿದ್ದಾರೆ. ಇನ್ನೂ ಕೆಲವರು ಕೆಮೆಂಟ್ ಮಾಡಿದ್ದು, ಹೆಬ್ಬಾವು ಈ ರೀತಿ ಬೇಟೆಯಾಡುತ್ತದೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.