ಶಿವಸೇನೆ ಜೊತೆ ಮೈತ್ರಿ ಇಲ್ಲ – ಎಲ್ಲ 288 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ?

Public TV
1 Min Read
Shivasene

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಎಲ್ಲ 288 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಸಂದರ್ಭದಲ್ಲೇ ವಿಧಾನಸಭಾ ಚುನಾವಣೆಯ ಸೀಟ್ ಸಹ ಹಂಚಿಕೆಯಾಗಿತ್ತು. ಆದರೆ ಈಗ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ ಎಂದು ಆಂಗ್ಲ ವಾಹಿನಿ ವರದಿ ಮಾಡಿದೆ.

ಬಿಜೆಪಿ ಮತ್ತು ಶಿವಸೇನೆ 132 ಸ್ಥಾನಗಳಲ್ಲಿ ಸ್ಪರ್ಧಿಸಲು ಮಾತುಕತೆ ನಡೆದಿತ್ತು. ಇದರಲ್ಲಿ ಬಿಜೆಪಿಯ 122 ಮಂದಿ ಸ್ಪರ್ಧಿಸಿದರೆ ಉಳಿದ 10 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸಿತ್ತು.

Amith Sha Uddav Takre 3

ಶಿವಸೇನೆ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಪೂರಕ ಎನ್ನುವಂತೆ ಸೋಮವಾರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಪ್ರತಿಕ್ರಿಯಿಸಿ, ಸದ್ಯ ಬಿಜೆಪಿಯ 122, ಶಿವಸೇನೆಯ 63 ಶಾಸಕರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲೂ ನಮ್ಮ ಮೈತ್ರಿ ಮುಂದುವರಿಯುತ್ತದೆ. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಈಗ ಹಂಚಿಕೆಯಾಗಿರುವ ಸಂಖ್ಯೆಯಷ್ಟೇ ಸ್ಪರ್ಧಿಸಬೇಕೇ? ಬೇಡವೇ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಿದ್ದರು.

2014ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿತ್ತು. ಹೀಗಾಗಿ ಯಾವೊಂದು ಪಕ್ಷ ಬಹುಮತ ಸಾಧಿಸಿರಲಿಲ್ಲ. ಬಹುಮತಕ್ಕೆ 145 ಸ್ಥಾನ ಬೇಕಿದ್ದು, ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42, ಶರಾದ್ ಪವಾರ್ ನೇತೃತ್ವದ ಎನ್‍ಸಿಪಿ 41 ರಲ್ಲಿ ಜಯಗಳಿಸಿತ್ತು.

Amith Sha Uddav Takre 1

ಲೋಕಸಭಾ ಚುನಾವಣೆಗೆ ಪ್ರತ್ಯೇಕವಾಗಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿಕೆ ನೀಡುತ್ತಿದ್ದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಜೊತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೈತ್ರಿ ಮಾತುಕತೆ ನಡೆಸಿ ಮೈತ್ರಿ ಮಾಡಿಕೊಂಡಿದ್ದರು. ಲೋಕಸಭಾ ಚುನಾವಣೆಯ ಸಮಯದಲ್ಲೇ ವಿಧಾನಸಭಾ ಚುನಾವಣೆಯ ಮಾತುಕತೆ ನಡೆದು ಸೀಟ್ ಹಂಚಿಕೆಯಾಗಿತ್ತು. ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಹಾಗೂ ಶಿವಸೇನೆ 23ರಲ್ಲಿ ಸ್ಪರ್ಧೆ ನಡೆಸಿತ್ತು. ಬಿಜೆಪಿ 23 ಸ್ಥಾನ ಗೆದ್ದರೆ ಶಿವಸೇನೆ 18 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *