ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ನೇತೃತ್ವದ ಆಡಳಿತಾರೂಢ ಎನ್‌ಸಿಪಿಯ (NCP) 18 ರಿಂದ 19 ಶಾಸಕರು ಮುಂಬರುವ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ನಂತರ ತಮ್ಮ ಪಕ್ಷವನ್ನು ಸೇರಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣ) ನಾಯಕ ರೋಹಿತ್ ಪವಾರ್ (Rohit Pawar) ಸೋಮವಾರ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಹ್ಮದ್‌ನಗರ ಜಿಲ್ಲೆಯ ಕರ್ಜತ್-ಜಮಖೇಡ್‌ನ ಶಾಸಕ ರೋಹಿತ್ ಪವಾರ್, ಜುಲೈ 2023 ರಲ್ಲಿ ವಿಭಜನೆಯಾದ ನಂತರ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಮತ್ತು ಇತರ ಹಿರಿಯ ನಾಯಕರ ವಿರುದ್ಧ ಎಂದಿಗೂ ಕೆಟ್ಟದಾಗಿ ಮಾತನಾಡದ ಹಲವಾರು ಎನ್‌ಸಿಪಿ ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.
ಶಾಸಕರು ಶಾಸಕಾಂಗ ಅಧಿವೇಶನಕ್ಕೆ ಹಾಜರಾಗಬೇಕು ಮತ್ತು ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಹಣವನ್ನು ಪಡೆಯಬೇಕು. ಆದ್ದರಿಂದ ಶಾಸಕರು ಅಧಿವೇಶನ ಮುಗಿಯುವವರೆಗೆ ಕಾಯುತ್ತಾರೆ ಶರದ್ ಪವಾರ್ (Sharad Pawar) ಅವರ ಮೊಮ್ಮಗ ತಿಳಿಸಿದರು.
ಎನ್‌ಸಿಪಿಯ 18 ರಿಂದ 19 ಶಾಸಕರು ನಮ್ಮೊಂದಿಗೆ ಮತ್ತು ಪವಾರ್ ಸಾಹೇಬ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಗಾರು ಅಧಿವೇಶನದ ನಂತರ ಅವರು ಶರದ್ ಪವಾರ್ ಬಣ ಸೇರುತ್ತಾರೆ ಎಂದರು.
ಶರದ್ ಪವಾರ್ ಮತ್ತು ಇತರ ನಾಯಕರು ಯಾರನ್ನು ಮರಳಿ ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು – ಮೈಸೂರು, ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ಷರತ್ತು
2019 ರ ಚುನಾವಣೆಯಲ್ಲಿ ಎನ್‌ಸಿಪಿ 54 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಜುಲೈ 2023 ರಲ್ಲಿ ಪಕ್ಷವು ವಿಭಜನೆಯಾದಾಗ, ಅಜಿತ್ ಪವಾರ್ ನೇತೃತ್ವದ ಬಣವು ಸುಮಾರು 40 ಶಾಸಕರ ಬೆಂಬಲವನ್ನು ಹೊಂದಿತ್ತು.
ವಿಧಾನಮಂಡಲದ ಮುಂಗಾರು ಅಧಿವೇಶನ ಜೂನ್ 27 ರಂದು ಆರಂಭವಾಗಿ ಜುಲೈ 12 ರಂದು ಕೊನೆಗೊಳ್ಳಲಿದ್ದು ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.