ಮಹಾರಾಷ್ಟ್ರ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು. ಬಂಡಾಯ ಶಾಸಕರ ಮುನಿಸಿಗೆ ಮಹಾರಾಷ್ಟ್ರ ಸರ್ಕಾರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಹೊಂದಿದ್ದ ನಂಟು ಪ್ರಮುಖ ಕಾರಣ ಎಂಬ ಸ್ಫೋಟಕ ಸುಳಿವೊಂದನ್ನು ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ್ ಶಿಂದೆ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಿಂಧೆ, ಹಲವಾರು ದುಷ್ಕೃತ್ಯಗಳನ್ನು ಮಾಡಿ, ಅಮಾಯಕರ ಬಲಿ ಪಡೆದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನೇರ ಸಂಪರ್ಕ ಹೊಂದಿರುವ ಜನರನ್ನು ಬಾಳ್ ಠಾಕ್ರೆ ಅವರ ಪಕ್ಷವು ಹೇಗೆ ಬೆಂಬಲಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದು ಮಹಾ ಸರ್ಕಾರದ ಬಿಕ್ಕಟ್ಟಿನಲ್ಲಿ ತಿರುವು ಪಡೆದುಕೊಂಡಿದ್ದು, ಬಂಡಾಯ ಶಾಸಕರ ಕೆಂಗಣ್ಣಿಗೆ ಇದು ಪ್ರಮುಖ ಕಾರಣವಾಯಿತೇ ಎಂಬ ಅನುಮಾನ ಕಾಡುತ್ತಿದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು
ಏಕನಾಥ್ ಶಿಂಧೆ ಟ್ವೀಟ್‍ನಲ್ಲಿ ಇನ್ನಷ್ಟು ಅನುಮಾನಗಳು ಮೂಡುವಂತೆ ಬರೆದುಕೊಂಡಿದ್ದು, ಮುಂಬೈನಲ್ಲಿ ಬಾಂಬ್ ದಾಳಿಗಳನ್ನು ನಡೆಸಿ ಅಮಾಯಕ ಜನರನ್ನು ಕೊಂದ ದಾವೂದ್‍ನೊಂದಿಗೆ ನೇರ ಸಂಪರ್ಕ ಹೊಂದಿರುವವರನ್ನು ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಹೇಗೆ ಬೆಂಬಲಿಸುತ್ತಾರೆ? ಇದನ್ನು ವಿರೋಧಿಸಲು ಈ ರೀತಿ ಹೋರಾಟಕ್ಕೆ ಇಳಿದಿದ್ದೇವೆ. ಈ ಹೆಜ್ಜೆ ನಮ್ಮನ್ನು ಸಾವಿನ ಅಂಚಿಗೆ ಕೊಂಡೊಯ್ದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಮುನ್ನುಗ್ಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸರ್ಕಾರ ನಾಲಾಯಕ್ ಎಂದ MES ಪುಂಡರು – ಡಿಸಿ ಕಚೇರಿ ಮುಂಭಾಗದಲ್ಲೇ ನಾಡದ್ರೋಹಿ ಘೋಷಣೆ
मुंबई बाँबस्फोट घडवून निष्पाप मुंबईकरांचा जीव घेणाऱ्या दाऊदशी थेट संबंध असणाऱ्यांना हिंदुहृदयसम्राट वंदनीय बाळासाहेब ठाकरे यांची शिवसेना समर्थन कशी करू शकते…?
यालाच विरोध म्हणून उचललेलं हे पाऊल; आम्हा सर्वांना मृत्यूच्या दारात घेऊन गेले तरी बेहत्तर..#MiShivsainik @rautsanjay61
— Eknath Shinde – एकनाथ शिंदे (@mieknathshinde) June 26, 2022
ಶಿವಸೇನೆ ಮತ್ತು ಬಾಳ್ ಠಾಕ್ರೆ ಅವರ ಸಿದ್ಧಾಂತವನ್ನು ರಕ್ಷಿಸಲು ಸತ್ತರೆ ನಾನು ಅದೃಷ್ಟಶಾಲಿ ಎಂದು ಸಂತೋಷ ಪಡುತ್ತೇನೆ ಎಂದು ಈ ಎರಡೂ ಟ್ವೀಟ್‍ಗಳನ್ನು ಶಿವಸೇನೆ ಸಂಸದ ಸಂಜಯ್ ರಾವತ್‍ಗೆ ಟ್ಯಾಗ್ ಮಾಡಿದ್ದಾರೆ.
हिंदुहृदयसम्राट वंदनीय बाळासाहेब ठाकरे यांच्या हिंदुत्वाच्या विचारांसाठी आणि बाळासाहेबांची शिवसेना वाचविण्यासाठी आम्हाला मरण जरी आलं तरी बेहत्तर….
तसे झाल्यास आम्ही सारे आमचं भाग्य समजू…#MiShivsainik @rautsanjay61
— Eknath Shinde – एकनाथ शिंदे (@mieknathshinde) June 26, 2022
ಈ ನಡುವೆ ಮೂರು ಪ್ರಮುಖ ಬೇಡಿಕೆಗಳೊಂದಿಗೆ ಏಕನಾಥ್ ಶಿಂಧೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿ ತುರ್ತು ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್, ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭಿಸಿದೆ. ಈ ವೇಳೆ ಬಂಡಾಯ ಶಾಸಕರು ಉದ್ಧವ್ ಠಾಕ್ರೆ ಸರ್ಕಾರ 3ನೇ ಎರಡರಷ್ಟು ಬೆಂಬಲ ಕಳೆದುಕೊಂಡಿದೆ. ಉದ್ಧವ್ ಠಾಕ್ರೆ ಸರ್ಕಾರಕ್ಕೆ ನಮ್ಮ ಬೆಂಬಲವಿಲ್ಲ. ನಾವು 39 ಶಾಸಕರು ಸರ್ಕಾರದಿಂದ ಹೊರ ಬಂದಿದ್ದು ಬೆಂಬಲ ಹಿಂಪಡೆದಿದ್ದೇವೆ ಎಂದಿದ್ದಾರೆ. ಬಳಿಕ ಕೋರ್ಟ್ ಅರ್ಜಿ ವಿಚಾರಣೆಯನ್ನೂ ಜುಲೈ 11ಕ್ಕೆ ಮುಂದೂಡಿದೆ. ಈ ಮೂಲಕ ಇನ್ನಷ್ಟು ದಿನ ಮಹಾರಾಷ್ಟ್ರ ಸರ್ಕಾರದ ಹೈಡ್ರಾಮಾ ಮುಂದುವರಿಯಲಿದೆ.