ಮುಂಬೈ: ಬಿಜೆಪಿ ಆಪರೇಷನ್ ಕಮಲದ ಚದುರಂಗದಾಟ ಮುಂದುವರಿದಿದೆ. ಕರ್ನಾಟಕ ಆಪರೇಷನ್ ಕಮಲದ ತಂತ್ರಗಾರಿಕೆಯೇ ಮಹಾರಾಷ್ಟ್ರದಲ್ಲೂ ಮರುಕಳಿಸಿದೆ. ಕರ್ನಾಟಕದ ನಂಬರ್ 17 ಆಗಿದ್ರೆ, ಮಹಾರಾಷ್ಟ್ರದ ನಂಬರ್ 40 ತಲುಪುತ್ತಿದೆ. ಹಾಗಾದ್ರೆ ಮೋದಿ- ಶಾ ಜೋಡಿಯ ಆಪರೇಷನ್ ಅಸಲಿಯತ್ತು ಏನು? ಇನ್ ಸೈಡ್ ಸ್ಟೋರಿ ಇಲ್ಲಿದೆ ನೋಡಿ.
ಒಂದು ಕಾಲ ಇತ್ತು. ಸರ್ಕಾರ ರಚನೆಗೆ ನಾಲ್ಕೈದು ಶಾಸಕರ ಕೊರತೆ ಇದ್ದರೆ ಹೇಗೆ ಅವರನ್ನ ಸೆಳೆಯೋದು? ಹೇಗೆ ಸರ್ಕಾರ ರಚನೆ ಮಾಡೋದು ಎಂಬ ಸರ್ಕಸ್ ದೊಡ್ಡಮಟ್ಟದಲ್ಲೇ ಇರ್ತಿತ್ತು. ಆದ್ರೆ ಈಗ ಚಿಟಿಕೆ ಹೊಡೆಯುವಷ್ಟರಲ್ಲಿ ನಂಬರ್ ಹೊಂದಿಸಬಹುದು ಎಂಬ ಮಟ್ಟಕ್ಕೆ ತಲುಪಿದೆ. ಅದೇ ಬಿಜೆಪಿ ಹೈಕಮಾಂಡ್ ಮಾಸ್ಟರ್ ಗೇಮ್ ಎನ್ನಲಾಗಿರುವ ಆಪರೇಷನ್ ಕಮಲ. ಎದುರಾಳಿಗಳ ನಂಬರ್ ಎಷ್ಟೇ ಇದ್ದರೂ ಆಟ ನಮ್ಮದೇ ಎಂಬ ರಾಜಕೀಯ ಸಂದೇಶ ರವಾನಿಸಿದೆ ಬಿಜೆಪಿ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಉದ್ಧವ್ ಠಾಕ್ರೆ
Advertisement
Advertisement
ಕರ್ನಾಟಕದಲ್ಲಿ 17 ಶಾಸಕರ ಆಪರೇಷನ್ ಮಾಡಿದ್ದ ಬಿಜೆಪಿ ಹೈಕಮಾಂಡ್, ಒಂದೆರಡು ಫೆಲ್ಯೂರ್ ಆಗಿ ಅಮೇಲೆ ಸಕ್ಸಸ್ ಆಗಿತ್ತು. ಕರ್ನಾಟಕದ ಆಪರೇಷನ್ ಕಮಲವೇ ಮಧ್ಯಪ್ರದೇಶಕ್ಕೆ ಮೆಟ್ಟಿಲಾಯ್ತು. ಈಗ ಮಹಾರಾಷ್ಟ್ರದ ಆಪರೇಷನ್ ಕಮಲಕ್ಕೆ ಮೆಟ್ಟಿಲಾಯ್ತಾ? ಎಂಬ ಚರ್ಚೆ ನಡೆಯುತ್ತಿದೆ. ಅಂದಹಾಗೆ ಶಿವಸೇನೆಯ 35 ರಿಂದ 40 ಶಾಸಕರಿಗೆ ಆಪರೇಷನ್ ಕಮಲ ನಡೆದಿದೆ ಎನ್ನಲಾಗ್ತಿದ್ದು, ಎಷ್ಟೇ ದೊಡ್ಡ ಸಂಖ್ಯೆ ಇದ್ದರೂ ನಾವು ಕೇರ್ ಮಾಡಲ್ಲ ಎಂಬ ಸಂದೇಶ ರವಾನಿಸಿದೆ ಎನ್ನಲಾಗಿದೆ. ದೇಶದಲ್ಲಿ ಗಟ್ಟಿ ಸರ್ಕಾರ ಇದ್ದರೆ ಯಾವ ರಾಜ್ಯದಲ್ಲಾದ್ರೂ ನಾವು ಅಧಿಕಾರ ಹಿಡಿಯುತ್ತೇವೆ. ಕೇಂದ್ರದಲ್ಲಿ 2024ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
Advertisement
ಅಂದಹಾಗೆ 2019 ಜುಲೈ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಆಗುತ್ತೆ. ಅಂದು ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ಮುಂಬೈ ಸೇಫ್ ಜಾಗ ಆಗಿತ್ತು. ಕರ್ನಾಟಕದ ಆಪರೇಷನ್ ಕಮಲದ ವೇಳೆ ಎರಡ್ಮೂರು ಬ್ಯಾಚ್ ಮಾಡಿ ದೆಹಲಿ, ಅಹಮದಾಬಾದ್, ಮುಂಬೈಗೆ ಕಾಂಗ್ರೆಸ್- ಜೆಡಿಎಸ್ ಶಾಸಕರನ್ನ ಬಿಜೆಪಿ ಹೈಕಮಾಂಡ್ ಕಳುಹಿಸಿತ್ತು. ಬಳಿಕ ಮುಂಬೈನಲ್ಲಿ ಎಲ್ಲರನ್ನೂ ಗುಡ್ಡೆ ಹಾಕಿದ್ದ ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲ ಸಕ್ಸಸ್ ಮಾಡಿಕೊಂಡಿತ್ತು. ಇದೀಗ ಮಹಾರಾಷ್ಟ್ರ ಆಪರೇಷನ್ ಕಮಲಕ್ಕೂ ಭರ್ಜರಿ ಸಿದ್ಧತೆ ಮಾಡಿರುವ ಬಿಜೆಪಿ ಹೈಕಮಾಂಡ್ ಸೂರತ್, ಅಹಮದಾಬಾದ್‌ನಿಂದ ಅಸ್ಸಾಂನ ಗುವಾಹಟಿಗೆ ಶಿವಸೇನಾ ರೆಬೆಲ್ಸ್ ಶಿಫ್ಟ್ ಮಾಡಿದೆ. ಅಸ್ಸಾಂನಲ್ಲೇ ಆಪರೇಷನ್ ಕಮಲದ ಶಿವಸೇನಾ ಶಾಸಕರನ್ನ ಇರಿಸಲು ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ
Advertisement
ಒಟ್ನಲ್ಲಿ ಮಹಾರಾಷ್ಟ್ರ ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್ ಮಾಸ್ಟರ್ ಮೈಂಡ್ ಗೇಮ್ ಫಿಕ್ಸ್ ಮಾಡಿದ್ದು, ಕರ್ನಾಟಕದ ಆಪರೇಷನ್ ಮಹಾರಾಷ್ಟ್ರ ಆಪರೇಷನ್ ಕಮಲಕ್ಕೆ ಬಲ ತಂದುಕೊಡ್ತಾ? ಎಂಬ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿರೋದಂತೂ ಸತ್ಯ.