ಮುಂಬೈ: ರಾಜ್ಯಸಭಾ ಮತ್ತು ಪರಿಷತತ್ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಈಗ ಈ ಸರ್ಕಾರವೇ ಪತನವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಶಿವಸೇನೆಯ ಪ್ರಭಾವಿ ನಾಯಕ, ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿರುವ ಏಕ್‌ನಾಥ್ ಶಿಂಧೆ ಜೊತೆ ಓರ್ವ ಪಕ್ಷೇತರ ಸೇರಿದಂತೆ 22 ಶಾಸಕರು ಗುಜರಾತಿನ ಸೂರತ್ ಹೋಟೆಲಿಗೆ ಶಿಫ್ಟ್ ಆಗಿದ್ದರಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.
ಪರಿಷತ್ ಚುನಾವಣೆಯಲ್ಲಿ ಬೆಂಬಲ ಇಲ್ಲದೇ ಇದ್ದರೂ ಬಿಜೆಪಿ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತ್ತು. ಈ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈಗ ಬಿಜೆಪಿ ನಾಯಕರು ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಮೂಲಗಳ ಪ್ರಕಾರ ಬಿಜೆಪಿ ಏಕ್‌ನಾಥ್ ಶಿಂಧೆ ಅವರಿಗೆ ಉಪ ಮುಖ್ಯಮಂತ್ರಿಯ ಆಫರ್ ನೀಡಿದೆ ಎನ್ನಲಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಶಿಂಧೆ ಅವರು ಅಸಮಾಧಾನಗೊಂಡಿದ್ದರು. ಪಕ್ಷ ತನ್ನನ್ನು ಕಡೆಗಣಿಸುತ್ತಿರುವ ವಿಚಾರ ತಿಳಿದು ಈಗ ಬಿಜೆಪಿಗೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯ ಬಳಿಕ MVA ಸರ್ಕಾರಕ್ಕೆ ಮತ್ತೆ ಶಾಕ್ – ಬಿಜೆಪಿಯ ಐವರು ಆಯ್ಕೆ
ಇಲ್ಲಿಯವರೆಗೆ ಏಕ್‌ನಾಥ್ ಶಿಂಧೆ ತನ್ನ ಮುಂದಿನ ನಡೆ ಏನು ಎಂದು ತಿಳಿಸಿಲ್ಲ. ಇತ್ತೀಚಿನ ಮಾಹಿತಿ ಪ್ರಕಾರ ಇನ್ನೂ 9 ಶಾಸಕರು ಸೂರತ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗುತ್ತಿದೆ.
Live Tv