ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ ನಡುವೆ 16 ಶಾಸಕರಿಗೆ ಉಪಸಭಾಪತಿ ಹೊರಡಿಸಿದ್ದ ಅನರ್ಹತೆಯ ನೋಟಿಸ್‍ಗೆ ಶಿಂಧೆ ಪಾಳಯ ಸುಪ್ರೀಂ ಕೋರ್ಟ್‍ನ ಮೊರೆ ಹೋಗಿದೆ.
ಉಪಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಹಾಗೂ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಎಸ್‍ಸಿ ರಜಾಕಾಲದ ಪೀಠ ಇಂದು ಬೆಳಿಗ್ಗೆ 10.30 ಗಂಟೆಗೆ ಶಿಂಧೆ ಶಿಬಿರದ ಅರ್ಜಿಗಳನ್ನು ಆಲಿಸುವ ಸಾಧ್ಯತೆಯಿದೆ.
Advertisement
Advertisement
ತಮ್ಮ ವಿರುದ್ಧದ ಅನರ್ಹತೆ ಅರ್ಜಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ಉಪಸಭಾಪತಿಗೆ ನಿರ್ದೇಶನ ನೀಡುವಂತೆ ಶಿಂಧೆ ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರ ರಜಾಕಾಲದ ಪೀಠ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕೊರೊನಾ ಉಲ್ಬಣ- ವಿಮಾನದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ
Advertisement
Advertisement
ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಬಂಡಾಯ ಶಾಸಕರು ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ನಲುಗುವಂತೆ ಮಾಡಿದ ಶಿಂಧೆ ಸಾಕಷ್ಟು ಸಂಖ್ಯೆಯ ನಿಷ್ಠಾವಂತ ಶಾಸಕರೊಂದಿಗೆ ಮುಂಬೈಯನ್ನು ತೊರೆದ ಒಂದು ದಿನದ ನಂತರ ಚೌಧರಿ ಅವರನ್ನು ಆ ಸ್ಥಾನಕ್ಕೆ ಅಜಯ್ ಚೌದರಿಯನ್ನು ಶಿವಸೇನೆ ಹೆಸರಿಸಿತ್ತು. ಇದನ್ನೂ ಓದಿ: ಇಂದಿನಿಂದ SSLC ಸಪ್ಲಿಮೆಂಟರಿ ಎಕ್ಸಾಂ – ಆಗಸ್ಟ್ ಮೊದಲ ವಾರದಲ್ಲಿ ರಿಸಲ್ಟ್