ಮುಂಬೈ: ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಭಾನುವಾರ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ.
ಮೊದಲ ಬಾರಿಗೆ ಬಿಜೆಪಿ ಶಾಸಕ ಮತ್ತು ಕೊಲಾಬಾ ಶಾಸಕ ನಾರ್ವೇಕರ್ ಶಿವಸೇನಾ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಆಗಿದ್ದ ರಾಜನ್ ಸಾಲ್ವಿ ಅವರನ್ನು ಸ್ಪೀಕರ್ ಚುನಾವಣೆಯಲ್ಲಿ ಸೋಲಿಸಿದರು. ಶಿಂಧೆ ಬಣದ ಬಿಜೆಪಿ ಅಭ್ಯರ್ಥಿಯಾದ ನಾರ್ವೇಕರ್ 164 ಮತಗಳನ್ನು ಪಡೆದರೆ, ಸಲ್ವಿ 107 ಮತಗಳನ್ನಷ್ಟೇ ಗಳಿಸಲು ಸಾಧ್ಯವಾದರು.
Advertisement
#WATCH | BJP MLA Rahul Narwekar takes charge as the Speaker of Maharashtra Assembly amid chants of “Jai Bhavani, Jai Shivaji”, “Jai Sri Ram”, “Bharat Mata ki Jai” and “Vande Mataram”.
(Source: Maharashtra Assembly) pic.twitter.com/oQ1qn2wdcp
— ANI (@ANI) July 3, 2022
ಈ ಬಗ್ಗೆ ಉಪಸಭಾಪತಿ ನರಹರಿ ಜಿರ್ವಾಲ್ ಮಾತನಾಡಿ, ಶಿಂಧೆ ಬಣ ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಬಿಜೆಪಿ ಜಯ ದಾಖಲಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಠಾಕ್ರೆ
Advertisement
Advertisement
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಶನಿವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶಿವಸೇನೆಯಿಂದ ಉಚ್ಚಾಟಿಸಿದ್ದರು.
Advertisement
Big moment !
The long wait is over – Maharashtra Legislative Assembly gets a Speaker !
Speaking in the House to congratulate Shri @rahulnarwekar the newly elected Speaker..#Maharashtra https://t.co/B2y55R3bhz
— Devendra Fadnavis (@Dev_Fadnavis) July 3, 2022
ಶಿವಸೇನೆ ಪಕ್ಷದ ಅಧ್ಯಕ್ಷನಾಗಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕುತ್ತೇನೆ ಎಂದು ಠಾಕ್ರೆ ಅವರು ಬಂಡಾಯ ಸೇನೆಯ ಶಾಸಕರ ಬಣದ ನೇತೃತ್ವ ವಹಿಸಿದ್ದ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ.
ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಿಂಧೆ ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ. ಇದನ್ನೂ ಓದಿ: 4 ರಾಜ್ಯಗಳಲ್ಲಿ 9 ಎಫ್‌ಐಆರ್ – ಬಿಜೆಪಿ ಮಾಜಿ ವಕ್ತಾರೆ ನೂಪುರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?