ಬೆಂಗಳೂರು: ಮಹಾರಾಷ್ಟ್ರ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದನ್ನು ನಟ ಪ್ರಕಾಶ್ ರಾಜ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಉದ್ಧವ್ ಠಾಕ್ರೆ ಸರ್. ನೀವು ರಾಜ್ಯವನ್ನು ನಿಭಾಯಿಸಿದ ರೀತಿಗೆ ಮಹಾರಾಷ್ಟ್ರದ ಜನರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಭರವಸೆ ನನಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ರಾಜೀನಾಮೆ ನಮಗೆ ಬೇಸರ ತರಿಸಿದೆ: ಶಿವಸೇನಾ ಬಂಡಾಯ ಶಾಸಕ
Advertisement
You did great dear sir @OfficeofUT … and I’m sure people of Maharashtra will stand by you for the way you handled the state.. the Chanakya s may eat laddoos today.. but your genuinity will linger longer .. more power to you.. #justasking
— Prakash Raj (@prakashraaj) June 29, 2022
Advertisement
ಚಾಣಕ್ಯರು (ಅಮಿತ್ ಶಾ) ಇಂದು ಲಡ್ಡುಗಳನ್ನು ತಿನ್ನಬಹುದು. ಆದರೆ ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ. ನಿಮಗೆ ಹೆಚ್ಚು ಶಕ್ತಿಯನ್ನೂ ನೀಡಲಿದೆ ಎಂದು ಠಾಕ್ರೆ ನಿಲುವನ್ನು ಸ್ವಾಗತಿಸಿದ್ದಾರೆ.
Advertisement
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರು ಬಂಡಾಯ ಎದ್ದಿದ್ದಾರೆ. ಶಿಂಧೆ ಬಣದಲ್ಲಿ ಶಿವಸೇನಾ ಬಂಡಾಯ ಶಾಸಕರು 40 ಮಂದಿ ಇದ್ದಾರೆ ಎನ್ನಲಾಗಿದೆ. ಪಕ್ಷೇತರರು ಸೇರಿ 50 ಬಂಡಾಯ ಶಾಸಕರಿದ್ದಾರೆ. ಇದನ್ನೂ ಓದಿ: ಶಿಂಧೆ ಬಣದ ಹೊಡೆತಕ್ಕೆ ಅಘಾಡಿ ಸರ್ಕಾರ ಪತನ – ಉದ್ಧವ್ ಠಾಕ್ರೆ ರಾಜೀನಾಮೆ
Advertisement
ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಉದ್ಧವ್ ಠಾಕ್ರೆಗೆ ರಾಜ್ಯಪಾಲರು ನಿನ್ನೆ ಸೂಚನೆ ನೀಡಿದ್ದರು. ರಾಜ್ಯಪಾಲರ ಸೂಚನೆ ವಿರುದ್ಧ ಠಾಕ್ರೆ ಸುಪ್ರೀಂ ಮೊರೆ ಹೋಗಿದ್ದರು. ಆದರೆ ಬಹುಮತ ಸಾಬೀತು ಸೂಚನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು. ಬೇರೆ ದಾರಿಯಿಲ್ಲದೇ ಠಾಕ್ರೆ ಅವರು ನಿನ್ನೆ ರಾತ್ರಿ ರಾಜೀನಾಮೆ ನೀಡಿದ್ದಾರೆ.