ದೆಹಲಿ: ಅಘಾಡಿ, ಎನ್‍ಸಿಪಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದಾಗಿ ಅನೈತಿಕ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂತು. ಆ ಸರ್ಕಾರದ ಪ್ರಮುಖ ಅಜೆಂಡಾ ಲೂಟಿ ಮಾಡಿ ತಿನ್ನುವುದಾಗಿತ್ತು ಎಂದು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
Advertisement
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಪ್ರಮುಖ ಕಾರಣ ಅವರ ಅನೈತಿಕ ಮೈತ್ರಿ. ಅಭಿವೃದ್ಧಿ ಅವರ ಅಜೆಂಡಾ ಆಗಿರಲಿಲ್ಲ. ಲೂಟಿ ಮಾಡಿ ತಿನ್ನುವುದು ಅವರ ಅಜೆಂಡಾ ಆಗಿತ್ತು. ಅವರ ಸರ್ಕಾರವನ್ನು ಬಿಜೆಪಿ ಯಾಕೆ ಸರ್ಕಾರ ಉರುಳಿಸಬೇಕು? ಅವರದ್ದು ಅನೈತಿಕ ಸರ್ಕಾರ. ನಾವು ಬೀಳಿಸಬೇಕಿದ್ದರೆ ಎರಡೂವರೆ ವರ್ಷ ಬೇಕಾಗಿತ್ತಾ? ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸೋನಿಯಾ, ಪವಾರ್, ಮಮತಾ ಬ್ಯಾನರ್ಜಿಗೆ ಕರೆ ಮಾಡಿ ಬೆಂಬಲ ಕೋರಿದ ದ್ರೌಪದಿ ಮುರ್ಮು
Advertisement
Advertisement
ಅಘಾಡಿ ಡಿಎನ್‍ಎ ಮಿಸ್ ಮ್ಯಾಚ್ ಆಗಿದೆ. ಅವರು ಇಷ್ಟು ದಿನ ಬದುಕಿದ್ದೇ ಪುಣ್ಯ. ಲೂಟಿಯೇ ಅವರ ಅಜೆಂಡಾ. ಅಭಿವೃದ್ಧಿ ಅವರ ಅಜೆಂಡಾ ಆಗಿರಲಿಲ್ಲ. ಲೂಟಿ ಮಾಡಿ ತಿನ್ನುವುದು ಅವರ ನೀತಿಯಾಗಿತ್ತು. ಶಿವಸೇನೆಯವರು ವೋಟ್ ಕೇಳಿದ್ದು ಫಡ್ನವಿಸ್ ಸರ್ಕಾರದ ಅಭಿವೃದ್ಧಿ ಹೆಸರಲ್ಲಿ. ಲೋಕಸಭೆಯಲ್ಲಿ ಅವರು ಸೀಟ್‍ಗಳಿಸಿದ್ದು ಮೋದಿ ಸರ್ಕಾರದ ಅಭಿವೃದ್ಧಿಯಿಂದ. ಅಪವಿತ್ರ ಮೈತ್ರಿ ಮಾಡಿಕೊಂಡು ಈಗ ಸರ್ಕಾರ ಉಳಿಸಿ ಎಂದರೆ ನಾವು ಎನೂ ಮಾಡೋಕೆ ಆಗುತ್ತೆ ಎಂದರು. ಇದನ್ನೂ ಓದಿ: ಸಚಿವ ಆನಂದ್ ಸಿಂಗ್ ಆಫೀಸಿನಲ್ಲಿ ಪುನೀತ್ ರಾಜ್ ಕುಮಾರ್ ಧರಿಸಿದ್ದ ‘ಜಾಕೆಟ್’
Advertisement
ಮಹಾರಾಷ್ಟ್ರ, ಗುಜರಾತ್ ಎಂಎಲ್‍ಎಗಳನ್ನು ಕಾಂಗ್ರೆಸ್‍ನವರು ಕರ್ನಾಟಕದಲ್ಲಿ ಇಟ್ಟಿರಲಿಲ್ವಾ? ನಮಗೆ ಕಷ್ಟ ಇದೆ ಅಂತ ಶಿವಸೇನೆಯ ಶಾಸಕರಲ್ಲ ನೀವು ಬಂದರೂ ನೆರವು ಕೊಡುತ್ತೇವೆ. ಈ ಸರ್ಕಾರ ಬೀಳಬೇಕು ಎಂದು ಮಹಾರಾಷ್ಟ್ರದ ಜನರ ನಿರೀಕ್ಷೆ ಮಾಡಿದ್ದಾರೆ. ಮಹಾರಾಷ್ಟ್ರ ಜನರ ಬಳಿ ಸರ್ಕಾರದ ಬಗ್ಗೆ ಕೇಳಿದಾಗ ಅವರ ಕೆಟ್ಟ ಸರ್ಕಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಘಾಡಿ ಸರ್ಕಾರ ಬಂದ ಬಳಿಕ ಸ್ಥಳೀಯ ಸಂಸ್ಥೆಗಳ OBC ಮೀಸಲಾತಿಗೆ ಕತ್ತರಿ ಬಿದ್ದಿದ್ದು. ಅವರ ಕೆಟ್ಟ ರಾಜನೀತಿಯ ಫಲವಾಗಿ OBC ಮೀಸಲಾತಿ ಇಲ್ಲದೆ ಆಗಿದೆ ಎಂದು ಕಿಡಿಕಾರಿದ್ದಾರೆ.