ಮುಂಬೈ: ಮಹಿಳೆಯಿಂದ ಪುರುಷನಾಗುವ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯ ಲಲಿತ್ ಸಾಳ್ವೆ (Lalit Salve) ಎಂಬ ಪೊಲೀಸ್ ಪೇದೆ (Police Constable) ಇದೀಗ ತಂದೆಯಾಗಿದ್ದಾರೆ.
ಲಲಿತ್ ಸಾಳ್ವೆ (36) ಅವರು 2020 ರಲ್ಲಿ ವಿವಾಹವಾಗಿದ್ದರು. ಇದೀಗ ಜನವರಿ 15 ರಂದು ಗಂಡು ಮಗುವಿಗೆ ತಂದೆಯಾದರು. ದಂಪತಿ ತಮ್ಮ ಮಗನಿಗೆ ಆರುಷ್ ಎಂದು ಹೆಸರಿಡಲು ನಿರ್ಧರಿಸಿದ್ದಾರೆ.
Advertisement
ಹೆಣ್ಣಿನಿಂದ ಪುರುಷನಾಗುವ ನನ್ನ ಪ್ರಯಾಣವು ಹೋರಾಟಗಳಿಂದ ತುಂಬಿತ್ತು. ಈ ಸಮಯದಲ್ಲಿ ನನ್ನನ್ನು ಅನೇಕ ಜನ ಬೆಂಬಲಿಸಿದ್ದಾರೆ. ನನ್ನ ಹೆಂಡತಿ ಸೀಮಾ ಮಗುವನ್ನು ಹೊಂದಲು ಬಯಸಿದ್ದಳು. ನಾನು ಈಗ ತಂದೆಯಾಗಿದ್ದೇನೆ ಎಂದು ನನಗೆ ಸಂತೋಷವಾಗಿದೆ. ನನ್ನ ಕುಟುಂಬ ಇದರಿಂದ ಸಂಭ್ರಮದಲ್ಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
Advertisement
ಲಲಿತ್ ಸಾಳ್ವೆ (ಹಿಂದಿನ ಲಲಿತಾ) ಜೂನ್ 1988ರಲ್ಲಿ ಜನಿಸಿದ್ದರು. 2010ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಮಹಿಳೆಯಾಗಿ ಬೆಳೆದ ಸಾಲ್ವೆ ಅವರು 2013ರಲ್ಲಿ ತಮ್ಮ ದೇಹದಲ್ಲಿ ಕೆಲವು ಬದಲಾವಣೆಗಳನ್ನು ಕಂಡುಕೊಂಡ ಬಳಿಕ, 2017ರಲ್ಲಿ ಕ್ಯಾರಿಯೋಟೈಪಿಂಗ್ (ಸಂಪೂರ್ಣ ಕ್ರೋಮೋಸೋಮ್ ಪೂರಕ ವಿಶ್ಲೇಷಣೆ) ಎಂಬ ಜೆನೆಟಿಕ್ ಪರೀಕ್ಷೆಗೆ ಒಳಗಾದರು. ಬಳಿಕ ಅವರ ಲಿಂಗವನ್ನು ಪುರುಷ ಎಂದು ರಿಪೋರ್ಟ್ ಗುರುತಾಗಿತ್ತು.
Advertisement
ನವೆಂಬರ್ 2017ರಲ್ಲಿ ಕಾನ್‍ಸ್ಟೆಬಲ್ ಲಿಂಗ ಮರುಹೊಂದಾಣಿಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಒಂದು ತಿಂಗಳ ರಜೆ ಕೋರಿ ಬಾಂಬೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಅವರಿಗೆ ಅವಕಾಶ ನೀಡಲಾಯಿತು. ಅವರು 2018 ಮತ್ತು 2020ರ ನಡುವೆ ಮುಂಬೈನ ಫೋರ್ಟ್ ಪ್ರದೇಶದ ಸರ್ಕಾರಿ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮೂರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನೂ ಓದಿ: ಯಾರು ಏನ್ ಬೇಕಿದ್ರೂ ಹೇಳಲಿ, ನಾನು ಅಯೋಧ್ಯೆಗೆ ಹೋಗ್ತೀನಿ: ಹರ್ಭಜನ್ ಸಿಂಗ್