ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಆಂದೋಲನ ಆರಂಭವಾಗಿದ್ದು, ಗ್ರಾಮಗಳ ಜನತೆ ಮನೆಯ ಮುಂಭಾಗದಲ್ಲಿ ಮನೆಯ ವರಸುದಾರನ ಹೆಸರಿನ ಫಲಕ ಹಾಕದೇ ತಮ್ಮ ಹೆಣ್ಣು ಮಕ್ಕಳ ಹೆಸರಿನ ಬೋರ್ಡ್ ಹಾಕಲಾಗುತ್ತಿದೆ.
ಸಾಮಾನ್ಯವಾಗಿ ಮನೆಯ ಮುಂಭಾಗದಲ್ಲಿ ಹಿರಿಯ ವ್ಯಕ್ತಿಯ ಹೆಸರಿನ ಬೋರ್ಡ್ ಹಾಕುತ್ತಾರೆ. ಆದ್ರೆ ಮಹಾರಾಷ್ಟ್ರದ ನಾಸಿಕ್, ಪುತಾಂಬ ಮತ್ತು ಅಹಮದ್ ನಗರದ ಸುತ್ತಲಿನ ಗ್ರಾಮಸ್ಥರು ತಮ್ಮ ಮನೆಯ ಮುಂದೆ ಮಗಳ ಹೆಸರಿನ ಫಲಕ ಹಾಕುತ್ತಿದ್ದಾರೆ.
Advertisement
ಮಹಾರಾಷ್ಟ್ರದಲ್ಲಿ ಜನಸಂಖ್ಯೆ ಅನುಗುಣವಾಗಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವುದಕ್ಕಾಗಿ ಈ ರೀತಿಯ ಫಲಕಗಳನ್ನು ಹಾಕಲಾಗುತ್ತಿದೆ. ಈಗಾಗಲೇ 80 ಗ್ರಾಮಗಳ 6,500 ಮನೆಗಳ ಮುಂಭಾಗದಲ್ಲಿ ಮಗಳ ಹೆಸರಿನ ಬೋರ್ಡ್ ಗಳು ರಾರಾಜಿಸುತ್ತಿವೆ.
Advertisement
Advertisement
ಈ ಆಂದೋಲನ ಮೊದಲಿಗೆ ಶಾಲೆಯೊಂದರಿಂದ ಆರಂಭವಾಗಿದೆ. ಪೋಮಡ್ ಎಂಬವರು ತಮ್ಮ ಮಕ್ಕಳ ಆಸೆ ಪೂರೈಸುವುದಕ್ಕಾಗಿ ಮನೆಯ ಮುಂದೆ ಅವರ ಹೆಸರಿನ ಫಲಕ ಹಾಕಿದ್ದರು. ನಂತರ ಪೋಮಡ್ ಇದೂವರೆಗೂ 80 ಗ್ರಾಮಗಳಿಗೆ ಭೇಟಿ ನೀಡಿ, ಅವರ ಮನೆಯ ಮುಂದೆ ಹೆಣ್ಣು ಮಕ್ಕಳ ಹೆಸರಿನ ಫಲಕ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಕೆಲವರು ಈ ಆಂದೋಲನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ಮಕ್ಕಳ ಹೆಸರಿನ ಬೋರ್ಡ್ ಹಾಕುತ್ತಿದ್ದಂತೆ ಈ ಆಂದೋಲನ ಸ್ವಾಗತಿಸಿದ್ದಾರೆ.
Advertisement
2011ರ ಜನಗಣತಿ ಪ್ರಕಾರ ಮಹಾರಾಷ್ಟ್ರದ ಲಿಂಗಾನುಪಾತ 1000 ಪುರುಷರಿಗೆ 929 ಮಹಿಳೆಯರಿದ್ದು, ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆ ಅಡಿಯಲ್ಲಿ ಈ ಆಂದೋಲನ ನಡೆಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv