ಮುಂಬೈ: ಇದೇ ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ಚುನಾವಣೆಗಾಗಿ (Maharashtra Poll) ಹಿನ್ನೆಲೆ ಕಾಂಗ್ರೆಸ್, ಶಿವಸೇನಾ (Shiv Sena) (ಉದ್ಧವ್ ಠಾಕ್ರೆ ಬಣ), NCP (ಶರದ್ ಪವಾರ್ ಬಣ) ಮಹಾ ವಿಕಾಸ್ ಅಘಾಡಿ (MVA) ಮೈತ್ರಿ ಕೂಟವೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
कई तरह की जातिगत बाधाएं हमारे समाज की सच्चाई हैं। इसके मद्देनजर fair opportunities तय करने के लिए हम महाराष्ट्र में जाति जनगणना का सर्वे कराएंगे और आरक्षण पर 50% ceiling को भी हटाने के लिए भी दबाव बनाएंगे।
तेलंगाना में हमने कल ही से जाति जनगणना के सर्वे का ऐतिहासिक कदम उठाया है।… pic.twitter.com/0MNkbChn5U
— Mallikarjun Kharge (@kharge) November 10, 2024
Advertisement
ಮೈತ್ರಿಕೂಟವು ಕರ್ನಾಟಕದ ಮಾದರಿಯಲ್ಲೇ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಮಹಾರಾಷ್ಟ್ರದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪ್ರಣಾಳಿಕೆಯನ್ನು (Manifesto) ಬಿಡುಗಡೆಗೊಳಿಸಿದ್ದಾರೆ. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳ ಕಾರ್ಯಸೂಚಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ನರೇಂದ್ರ ಮೋದಿ ಸುಳ್ಳಿನ ಸರದಾರ – ಮಲ್ಲಿಕಾರ್ಜುನ ಖರ್ಗೆ ತೀವ್ರ ತರಾಟೆ
Advertisement
Advertisement
ಏನೇನು ಗ್ಯಾರಂಟಿ?
ಈ ಬಾರಿ ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದರೆ ʻಮಹಾಲಕ್ಷ್ಮಿʼ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಮಹಿಳೆಯರಿಗೆ ಕರ್ನಾಟಕದ ಮಾದರಿಯಲ್ಲೇ ಉಚಿತ ಬಸ್ ಸೇವೆ, 500 ರೂ. ದರದಲ್ಲಿ ವಾರ್ಷಿಕ 6 ಸಿಲಿಂಡರ್ ವಿತರಣೆ ಮಾಡಲಾಗುವುದು. ಅಲ್ಲದೇ ಮಹಿಳೆಯರ ಸುರಕ್ಷತೆಗಾಗಿ ಬಲವಾದ ಕಾನೂನುಗಳನ್ನು ರೂಪಿಸುವುದು, 9 ರಿಂದ 16 ವರ್ಷ ವಯಸ್ಸಿನ ಹುಡುಗಿಉರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ, ಪ್ರತಿ ತಿಂಗಳು 2 ದಿನಗಳ ರಜೆ ನೀಡಲಾಗುವುದು ಎಂದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
Advertisement
ರೈತರಿಗೆ ʻಮಹಾʼ ಭರವಸೆ:
ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗುವಂತೆ ಯೋಜನೆ ಜಾರಿಗೆ ತರಲಾಗುವು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನ ನೇಮಕ ಮಾಡಲಾಗುವುದು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲಾಗುವುದು, ಬೆಳೆ ವಿಮೆ ಯೋಜನೆಯನ್ನೂ ಜಾರಿಗೆ ತರಲಾಗುವುದು ಎಂದು ಕೂಟವು ಭರವಸೆ ನೀಡಿದೆ. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ
ಅಲ್ಲದೇ ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂ. ಭತ್ಯೆ ನೀಡಲಾಗುವುದು, ರಾಜ್ಯ ವಿದ್ಯಾರ್ಥಿವೇತನ ಯೋಜನೆಗಳನ್ನು ವಿಸ್ತರಿಸಲಾಗುವುದು. ಆರೋಗ್ಯ ವಿಮಾ ಪಾಲಿಸಿಯನ್ನು ವಿಸ್ತರಿಸಲಾಗುವುದು. ಸಾಮಾಜಿಕ ನ್ಯಾಯದ ಅಡಿಯಲ್ಲಿ ಜಾತಿ ಜನಗಣತಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 10 ವರ್ಷಗಳಿಂದ ಬಿಜೆಪಿ ಮತ್ತು ಮಹಾಯುತಿ ಮೈತ್ರಿಕೂಟ ಈ ರಾಜ್ಯಕ್ಕೆ ದ್ರೋಹ ಬಗೆದಿದೆ. ಚುನಾವಣೆ ಬಂದಿದೆ ಅಂತ ರೈತರ ಸಾಲ ಮನ್ನಾ ಮಾಡುವುದಾಗಿ ಡೋಂಗಿ ಬಿಡುತ್ತಿದೆ. ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಚನ್ನಪಟ್ಟಣದ ಅಕಿಲ್ ಷಾ ಖಾದ್ರಿ ದರ್ಗಾ ಗುರುಗಳ ಭೇಟಿಯಾದ ಹೆಚ್‌ಡಿಡಿ – ಮೊಮ್ಮಗನ ಗೆಲ್ಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ