ಮುಂಬೈ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವದ ಅತ್ಯಂತ ಕಿರಿಯ ಮಹಿಳೆ ಜ್ಯೋತಿ ಆಮ್ಗೆ ಅವರು ಪೊಲೀಸರಿಗೆ ಸಾಥ್ ನೀಡಿದ್ದಾರೆ.
26 ವರ್ಷದ ಜ್ಯೋತಿ ಆಮ್ಗೆ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಪೊಲೀಸರೊಂದಿಗೆ ರಸ್ತೆಗೆ ಬಂದು ಕೊರೊನಾ ವೈರಸ್ ಹರಡದಂತೆ ತಡೆಯಲು ಸಹಾಯ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ನಾಗ್ಪುರ ಪೊಲೀಸರು ಜ್ಯೋತಿ ಅವರನ್ನು ತಮ್ಮ ವಾಹನದ ಮೇಲೆ ನಿಲ್ಲಿಸಿ ಮೈಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು
be Safe Stay at Home Hi fans,
I am Jyoti Amge Smallest women of the World and Guinness World Record holder’s pic.twitter.com/91vN1HSfmc
— Jyoti Amge (@JyotiAmge) April 13, 2020
ಹೆಮ್ಮಾರಿ ಕೊರೊನಾ ವೈರಸ್ ಎದುರಿಸಲು ಸ್ಥಳೀಯ ಆಡಳಿತಕ್ಕೆ, ಪೊಲೀಸರಿಗೆ ಸಹಾಯ ಹಾಗೂ ಸಹಕಾರ ನೀಡಬೇಕು. ಜೊತೆಗೆ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜ್ಯೋತಿ ಆಮ್ಗೆ ಸಾರ್ವಜನಿಕರಿಗೆ ಕೇಳಿಕೊಂಡರು.
ಆಮ್ಗೆ ಅವರು ನಟಿಯಾಗಿದ್ದು, ಕೊರೊನಾ ವೈರಸ್ ಹರಡಿದ ನಂತರ ಅವರು ಕೂಡ ತಮ್ಮ ಎಲ್ಲಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಲಾಕ್‍ಡೌನ್ ನಂತರ ಮನೆಯೊಳಗೆ ಉಳಿದುಕೊಂಡಿದ್ದಾರೆ.
ಜ್ಯೋತಿ ಅವರು 26 ವರ್ಷದವರಾಗಿದ್ದು, 62.8 ಸೆಂ.ಮೀ ಎತ್ತರ ಇದ್ದಾರೆ. 2011ರಲ್ಲಿ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂದು ಗಿನ್ನಿಸ್ ಸಂಸ್ಥೆ ಪ್ರಕಟಿಸಿತ್ತು.