ಮುಂಬೈ: ಮಹಾರಾಷ್ಟ್ರ (Maharashtra) ಸರ್ಕಾರದ ಸಾಮಾಜಿಕ ನ್ಯಾಯ ಸಚಿವ ಮತ್ತು ಶಿವಸೇನಾ ನಾಯಕ ಸಂಜಯ್ ಶಿರ್ಸಾತ್ (Sanjay Shirsat) ಕೊಠಡಿಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
2019 ಮತ್ತು 2024 ರ ನಡುವೆ ಸಂಜಯ್ ಶಿರ್ಸಾತ್ ಆಸ್ತಿ ಹೆಚ್ಚಳದ ಬಗ್ಗೆ ಶಿರ್ಸಾತ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟಿಸ್ ಬಂದಿದೆ. ನೋಟಿಸ್ ಬಂದ ಒಂದು ದಿನದ ನಂತರ ವಿಡಿಯೋ ಹರಿದಾಡಲು ಆರಂಭಿಸಿದೆ. ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್ – ಬುಲ್ಡೋಜರ್‌ನಿಂದ ನೆಲಸಮ
महाराष्ट्र के मंत्री संजय सिरसाठ का वीडियो वायरल
◆ वीडियो में सिगरेट पीते नजर आ रहे हैं कैबिनेट मंत्री संजय सिरसाठ
◆ उनके बगल में एक पैसों से भरा बैग भी रखा है
Sanjay Shirsat | #SanjayShirsat #EknathShinde pic.twitter.com/TmoDyaU3GR
— News24 (@news24tvchannel) July 11, 2025
ವಿಡಿಯೋದಲ್ಲಿ ಏನಿದೆ?
ಕೊಠಡಿಯಲ್ಲಿ ಶಾಸಕರು ಬನಿಯನ್ ಮತ್ತು ಶಾರ್ಟ್ಸ್ ಧರಿಸಿ ಹಾಸಿಗೆಯ ಮೇಲೆ ಕುಳಿತು ಸಿಗರೇಟ್ ಸೇದುತ್ತಿದ್ದಾರೆ. ಪಕ್ಕದಲ್ಲಿ ಸಾಕು ನಾಯಿಯನ್ನು ಸಹ ಕಾಣಬಹುದು. ಕೋಣೆಯಲ್ಲಿ ಇರಿಸಲಾಗಿರುವ ಚೀಲದಲ್ಲಿ ನೋಟುಗಳ ಬಂಡಲ್ ಪತ್ತೆಯಾಗಿದೆ. ಇದನ್ನೂ ಓದಿ: ಕಾರಲ್ಲಿ ದನ ಕದ್ದೊಯ್ತಿದ್ದಾಗ ದಾಳಿ – ಪೊಲೀಸ್ರ ಮೇಲೆ ರಾಡ್ ಬೀಸಿದ ದನಗಳ್ಳರು
ತನ್ನ ಮೇಲೆ ಬಂದ ಆರೋಪಕ್ಕೆ ಪ್ರತಿಕ್ರಿಯಿಸಿ, ಕೆಲವರು ನನ್ನೊಂದಿಗೆ ಸಮಸ್ಯೆ ಹೊಂದಿದ್ದರು, ಆದರೆ ನಾನು ಅವರಿಗೆ ಉತ್ತರಿಸುತ್ತೇನೆ. ನಾನು ಯಾವುದೇ ಒತ್ತಡದಲ್ಲಿಲ್ಲ ಎಂದು ಹೇಳಿದ್ದಾರೆ.