ಮುಂಬೈ: ಕಲ್ಲಿದ್ದಲು ಕೊರತೆಯಿಂದಾದಾಗಿ 12 ರಾಜ್ಯಗಳು ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವತ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೂಕ್ಷ್ಮ ಮಟ್ಟದ ಯೋಜನೆಯಿಂದಾಗಿ ಕಳೆದ ಐದರಿಂದ ಆರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇರಲಿಲ್ಲ. ವಿದ್ಯುತ್ ಕೊರತೆಯು ಶೆ.15ರಷ್ಟಿದೆ ಎಂದರು.
Advertisement
Advertisement
ರಾಜ್ಯದ ಸ್ವಾಮ್ಯದ ಮಹಾಜೆಂಕೊ 8000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಕರಾವಳಿ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಆಮದು ಮಾಡಿಕೊಂಡ ಕಲ್ಲಿದ್ದಲಿನ ಮೇಲೆ ಕಾರ್ಯನಿರ್ವಹಿಸುತ್ತವೆ. ಆಮದು ಮೇಲಿನ ನಿಷೇಧವನ್ನು ಕೇಂದ್ರವು ಇತ್ತೀಚೆಗೆ ತೆಗೆದುಹಾಕಿದೆ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು
Advertisement
Advertisement
ರಾಜ್ಯ ಸರ್ಕಾರವು ಒಂದು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಟೆಂಡರ್ ನೀಡಿದೆ. ಕಲ್ಲಿದ್ದಲು ಕೊರತೆಯು ರೇಕ್ ಕೊರತೆಯಿಂದ ಕೂಡಿದೆ. ನಮಗೆ ದಿನಕ್ಕೆ 37 ರೇಕ್‍ಗಳು ಬೇಕಾಗುತ್ತವೆ, ಆದರೆ ಕೇವಲ 26 ಸಿಗುತ್ತದೆ. ಪ್ರತಿ ರೇಕ್‍ನಿಂದ 4,000 ಮೆಟ್ರಿಕ್ ಟನ್ ಕಲ್ಲಿದ್ದಲು ಸಾಗಿಸಬಹುದು ಎಂದರು. ಇದನ್ನೂ ಓದಿ: ಕಾರು ಪಲ್ಟಿ – ಪ್ರಾಣಾಪಾಯದಿಂದ ಟಿಬಿ ಜಯಚಂದ್ರ ಪಾರು