ಬೆಂಗಳೂರು: ಎಂಇಎಸ್(MES) ಪುಂಡರ ವಿರುದ್ಧ ಕನ್ನಡಿಗರು ಸಮರ ಸಾರಲು ಮುಂದಾಗಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡಿಗರ ಆಕ್ರೋಶ ಕಟ್ಟೆಯೊಡೆದಿದೆ. ಅತ್ತ ಪುಂಡರ ವಿರುದ್ಧ ಕನ್ನಡ ಪರ ಸಂಘಟನೆಗಳು ಎದ್ದು ನಿಂತರೆ, ಇತ್ತ ಅದೇ ಪುಂಡರ ವಿರುದ್ಧ ಎಪಿಎಂಸಿ ಕಾರ್ಮಿಕ ಸಂಘಟನೆ ವಿಭಿನ್ನವಾಗಿ ತೊಡೆ ತಟ್ಟಿ ನಿಂತಿದೆ.
Advertisement
ಹೌದು. ಇಂದಿನಿಂದ ಬೆಂಗಳೂರು ಎಪಿಎಂಸಿಯಲ್ಲಿ ಮಹಾರಾಷ್ಟ್ರ ವಸ್ತುಗಳಿಗೆ ನಿರ್ಬಂಧ ಹೇರಲು ಮುಂದಾಗಿದೆ. ಇಂದಿನಿಂದ ಬೆಂಗಳೂರಿನ ಎಪಿಎಂಸಿಯಲ್ಲಿ ಮಹಾರಾಷ್ಟ್ರ ವಸ್ತುಗಳು ನೋ ಲೋಡ್, ನೋ ಅನ್ ಲೋಡ್‍ಗೆ ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ
Advertisement
Advertisement
ಮಹಾರಾಷ್ಟ್ರ ವಸ್ತುಗಳ ಆಮದು ಮತ್ತು ಸಾಗಾಟಕ್ಕೆ ಬ್ರೇಕ್ ಹಾಕುವ ಮೂಲಕ ಮಹಾರಾಷ್ಟ್ರಕ್ಕೆ ಶಾಕ್ ನೀಡಲು ಸಂಘಟನೆ ತಯಾರಿ ನಡೆಸಿದೆ. ಎಂಇಎಸ್ ಪುಂಡರು ಪುಂಡಾಟಿಕೆ ನಿಲ್ಲಿಸದಿದ್ದರೆ ಇನ್ನಷ್ಟು ತಕ್ಕ ಪ್ರತಿಫಲ ಅನುಭವಿಸುತ್ತೀರಿ ಎಂದು ಎಪಿಎಂಸಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅರುಣ್ ಪರಮೇಶ್ ಅವರು ಪುಂಡರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?
Advertisement
ನಾವು ಎಂಇಎಸ್ ಪುಂಡರ ಹಾಗೇ ಕಲ್ಲು ಹೊಡೆಯುವುದಿಲ್ಲ. ನಮ್ಮ ಹೊಡೆತದ ಏಟಿನ ಶೈಲಿಯೇ ಬೇರೆ. ಇಂದಿನಿಂದ ಬೆಂಗಳೂರು ಎಪಿಎಂಸಿಯಲ್ಲಿ ಮಹಾರಾಷ್ಟ್ರ ಲಾರಿಗಳ ಲೋಡಿಂಗ್ ಅನ್ ಲೋಡಿಂಗ್ ಮಾಡುವುದಿಲ್ಲ. ಆ ಭಾಗದಿಂದ ಸಕ್ಕರೆ ಮತ್ತು ಬೆಳೆ ಆಮದು ಆಗುತ್ತಿತ್ತು. ನಮ್ಮಿಂದ ಕಾಳುಗಳ ಸಾಗಣೆ ಆಗುತ್ತಿತ್ತು. ಇಂದಿನಿಂದ ಇವೆಲ್ಲ ಬಂದ್ ಆಗಲಿದೆ. ನಾವು ಕನ್ನಡ ಸ್ವಾಭಿಮಾನಿಗಳು. ಇಷ್ಟಕ್ಕೆ ಪುಂಡರು ಎಚ್ಚೆತ್ತುಕೊಳ್ಳದ್ದಿದ್ದರೆ ಎಪಿಎಂಸಿ ಆವರಣಕ್ಕೆ ಲಾರಿಗಳಿಗೆ ಪ್ರವೇಶವನ್ನೇ ನಿರ್ಬಂಧ ಹೇರುತ್ತೇವೆ. ಕೇವಲ ಬೆಂಗಳೂರು ಮಾತ್ರ ಅಲ್ಲ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೀಗೆ ಮಾಡುತ್ತೇವೆ ಎಂದು ವಾರ್ನ್ ಮಾಡಿದ್ದಾರೆ.