ಚಾಕೊಲೇಟ್‌ಗಾಗಿ ಹಣ ಕೇಳಿದ್ದಕ್ಕೆ 4 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ

Public TV
1 Min Read
chocolate

ಮುಂಬೈ: ಚಾಕೊಲೇಟ್‌ಗಾಗಿ ಹಣ ಕೇಳಿದ್ದಕ್ಕೆ ಕುಡಿದ ಮತ್ತಿನಲ್ಲಿ 4 ವರ್ಷದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ (Maharashtra) ಲಾತೂರ್ (Latur) ಜಿಲ್ಲೆಯ ಉದ್ವೀರ್ ತಾಲೂಕಿನ ಭೀಮಾ ತಾಂಡದಲ್ಲಿ ನಡೆದಿದೆ.

ಆರೋಪಿಯನ್ನು ಬಾಲಾಜಿ ರಾಥೋಡ್ ಹಾಗೂ ಮೃತ ಬಾಲಕಿಯನ್ನು ಆರುಷಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ದಾಖಲೆ ಬರೆದ ಸಿದ್ದರಾಮಯ್ಯ

ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಬಾಲಾಜಿಗೆ ಕುಡಿತದ ಚಟವಿತ್ತು. ಹೀಗಾಗಿ ಪ್ರತಿದಿನ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈತನ ಜಗಳದಿಂದ ಬೇಸತ್ತು ಮನೆ ಬಿಟ್ಟು ಹೋದ ಪತ್ನಿ, ತನ್ನ ತಂದೆಯೊಂದಿಗೆ ಇದ್ದಳು. ಕೊಲೆಯಾದ ದಿನ ಮಧ್ಯಾಹ್ನ ಮೃತ ಆರುಷಿ, ಚಾಕೊಲೇಟ್ ತೆಗೆದುಕೊಳ್ಳಲು ಹಣ ಕೇಳಿದ್ದಳು. ಅದೇ ಕೋಪದಿಂದ ಸೀರೆಯಿಂದ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಆರೋಪಿಯ ಪತ್ನಿ ವರ್ಷಾ ದೂರು ದಾಖಲಿಸಿದ್ದು, ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ದೂರಿನ ಮೇರೆಗೆ ಎಫ್‌ಐಆರ್ (FIR) ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ಶಾಕ್ – ತಹಶೀಲ್ದಾರ್ ಸಹಿ ನಕಲಿಸಿ, 8 ಎಕರೆ ಬೇರೆಯವ್ರ ಹೆಸರಿಗೆ ವರ್ಗ

Share This Article