ಮುಂಬೈ: ದೀಪಾವಳಿ ಹಬ್ಬದಂದು ವ್ಯಕ್ತಿಯೋರ್ವ ಅಪಾರ್ಟ್‍ಮೆಂಟ್ ಕಟ್ಟಡದ ಕಿಟಕಿಗಳಿಗೆ ರಾಕೆಟ್ (Diwali Rockets) ಹಾರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ (Maharashtra) ಥಾಣೆ (Thane) ಜಿಲ್ಲೆಯ ಉಲ್ಹಾಸ್‍ನಗರ ಪಟ್ಟಣದಲ್ಲಿ (Ulhasnagar town) ನಡೆದ ಈ ಘಟನೆಯ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ರಾಕೆಟ್ ಹಾರಿಸಿದ ಅಪರಿಚಿತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಮತ್ತು ಆತನ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
Advertisement
Need to be dealt strictly by invoking charges of Attempt to Commit muder ( Section 307 IPC r/w Section 436 IPC ) …it’s deliberate attempt by this Maniac. This clip is from Thane area. pic.twitter.com/dOwhfhRi1g
— Avinash Dharmadhikari (@Copavinash) October 24, 2022
Advertisement
ವೀಡಿಯೋದಲ್ಲಿ ವ್ಯಕ್ತಿ ಅಪಾರ್ಟ್‍ಮೆಂಟ್ ಕಟ್ಟಡದ ಕಿಟಕಿಗಳಿಗೆ ಕೆಳಗೆ ನಿಂತುಕೊಂಡು ಬಾಕ್ಸ್‌ನಲ್ಲಿದ್ದ ರಾಕೆಟ್‍ಗಳನ್ನು ಒಂದರ ನಂತರ ಒಂದರಂತೆ ಹಾರಿಸುತ್ತಾನೆ. ಈ ವೇಳೆ ರಾಕೆಟ್‍ಗಳು ಅಪಾರ್ಟ್ ಮಹಡಿಗಳಿಗೆ, ಬಾಲ್ಕನಿ ಮತ್ತು ಕಿಟಕಿಗಳಿಗೆ ಹೋಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?
Advertisement
Advertisement
ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 285 (ಬೆಂಕಿ ಅಥವಾ ದಹ್ಯವಸ್ತುವಿನ ಸಂಬಂಧವಾಗಿ ನಿರ್ಲಕ್ಷ್ಯ ವರ್ತನೆ), 286 (ಆಸ್ಫೋಟಕ ಪದಾರ್ಥಗಳ ಸಂಬಂಧವಾಗಿ ನಿರ್ಲಕ್ಷ್ಯ ವರ್ತನೆ) ಮತ್ತು 336 (ಇತರ ಪ್ರಾಣ ಅಥವಾ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.