– ಚುನಾವಣಾ ಆಯೋಗದ ವಿರುದ್ಧ ಆಕ್ರೋಶ
ಮುಂಬೈ: ಇಲ್ಲಿನ ವರ್ಲಿ ಪ್ರದೇಶದ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಸೇನೆ (Shiv Sena (UBT)) ಕಾರ್ಯಕರ್ತ ಹಾಗೂ ಏಜೆಂಟ್ ಮನೋಹರ್ ನಲ್ಗೆ (62) ಅವರ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿದೆ.
ಮನೋಹರ್ ನಲ್ಗೆಯವರು ಮತದಾನ ಮುಗಿದ ಬಳಿಕ ಶೌಚಾಲಯಕ್ಕೆ ತೆರಳಿದ್ದರು. ಮತಕೇಂದ್ರ ಮುಚ್ಚುವ ವೇಳೆ ಅವರ ಸಹಿ ಬೇಕಿತ್ತು, ಈ ವೇಳೆ ಅವರು ವಾಪಸ್ ಮರಳದೇ ಇರುವುದನ್ನು ಕಂಡು ಚುನಾವಣಾ ಸಿಬ್ಬಂದಿ ಹುಡುಕಾಡಿದ್ದಾರೆ. ಆಗ ಅವರು ಶೌಚಾಲಯದಲ್ಲಿ ಕುಸಿದು ಬಿದ್ದಿರುವುದನ್ನು ಕಂಡು ಕೂಡಲೇ ಸಮೀಪದ ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು. ಇದನ್ನೂ ಓದಿ: ಇರಾನ್ ಅಧ್ಯಕ್ಷರ ಸಾವಿನಲ್ಲಿ ನಮ್ಮ ಕೈವಾಡವಿಲ್ಲ: ಇಸ್ರೇಲ್ ಸ್ಪಷ್ಟನೆ
ದಕ್ಷಿಣ ಮುಂಬೈ ಕ್ಷೇತ್ರದ ಅಭ್ಯರ್ಥಿ ಅರವಿಂದ್ ಸಾವಂತ್, ಚುನಾವಣಾ ಆಯೋಗದ ತಪ್ಪಿನಿಂದ ನಮ್ಮ ಶಿವಸೈನಿಕ ಮನೋಹರ್ ನಲ್ಗೆ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಚುನಾವಣಾ ಆಯೋಗ (ECI) ಸರಿಯಾದ ವ್ಯವಸ್ಥೆ ಮಾಡದ ಕಾರಣ ಜನ ಹಾಗೂ ಚುನಾವಣಾ ಸಿಬ್ಬಂದಿ ಬಿಸಿಲಿನಲ್ಲಿ ನಿಲ್ಲಬೇಕಾಯಿತು. ಇದು ನಲ್ಗೆಯವರ ಸಾವಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದರ ನಡುವೆ ಚುನಾವಣಾ ಸಿಬ್ಬಂದಿ ಚುನಾವಣಾ ಆಯೋಗದಿಂದ ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ ಇದು ನಲ್ಗೆಯವರ ಸಾವಿಗೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಇದರ ನಡುವೆ ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಕೂಡ ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಹಲವಾರು ಮತಗಟ್ಟೆಗಳಲ್ಲಿ ಅನಾನುಕೂಲತೆಗಳಿವೆ. ಹಲವು ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಮತ್ತು ಹಲವಾರು ಸ್ಥಳಗಳಲ್ಲಿ ಇವಿಎಂ ಯಂತ್ರಗಳು ಅಸಮರ್ಪಕವಾಗಿದ್ದವು ಎಂದು ಆರೊಪಿಸಿದ್ದಾರೆ. ಇದನ್ನೂ ಓದಿ: ಸಾಲ ಮರುಪಾವತಿಸುವಂತೆ ಪತ್ನಿ, ಪುತ್ರನಿಗೆ 2 ದಿನ ಗೃಹ ಬಂಧನ- ಮನನೊಂದು ರೈತ ಆತ್ಮಹತ್ಯೆ