ಬೆಳಗಾವಿ ರಣಕಣದಲ್ಲಿ ಮಹಾರಾಷ್ಟ್ರ ನಾಯಕರಿಂದ ಮತಯಾಚನೆ!

Public TV
2 Min Read
belagavi maharashtra leader 3

ಬೆಳಗಾವಿ: ಬೆಳಗಾವಿ (Belagavi) ರಣಕಣದಲ್ಲಿ ಮಹಾರಾಷ್ಟ್ರ (Maharashtra) ನಾಯಕರಿಂದ ಮತಯಾಚನೆ ನಡೆಯುತ್ತಿದ್ದು, ಮಹಾರಾಷ್ಟ್ರದ ಬಿಜೆಪಿ, ಕಾಂಗ್ರೆಸ್, ಶಿವಸೇನೆಯ ‌ಘಟಾನುಘಟಿ ನಾಯಕರಿಂದ ಮತಬೇಟೆ ಶುರುವಾಗಿದೆ. ಮರಾಠಿ ಭಾಷಿಕ ಪ್ರದೇಶಗಳಲ್ಲಿ ಮಹಾರಾಷ್ಟ್ರ ಕೈ, ಕಮಲ‌ ನಾಯಕರು ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ.

belagavi maharashtra leaders 3

ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಕೇಂದ್ರ ‌ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಮತಬೇಟೆ ನಡೆಸಿದರೆ, ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಬಳಿಕ ಕಾಂಗ್ರೆಸ್ ಪರ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವ್ಹಾಣ್ ಪ್ರಚಾರ ನಡೆಸಲಿದ್ದಾರೆ.‌ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಅಶೋಕ್ ಚವ್ಹಾಣ್ ಮತಯಾಚನೆ ನಡೆಸಲಿದ್ದಾರೆ. ಅಶೋಕ ಚವ್ಹಾಣ್‌ಗೆ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ಸತೇಜ್ ಪಾಟೀಲ, ಮಾಜಿ ಸಚಿವ ವಿಶ್ವಜಿತ್ ಕದಂ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

ಬೆಳಗಾವಿ ತಾಲೂಕಿನ ‌ಬೆನಕನಹಳ್ಳಿಯಲ್ಲಿ ಸಂಜೆ 4 ಕ್ಕೆ ನಡೆಯುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದು, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣದಲ್ಲಿ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಪ್ರಚಾರ ಮಾಡಲಿದ್ದಾರೆ.‌ ಬೆಳಗಾವಿ ಉತ್ತರ ‌ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ, ದಕ್ಷಿಣ ‌ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ, ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಲ್ಕರ್ ಪರ ಫಡ್ನವಿಸ್ ಮತಯಾಚನೆ ನಡೆಸಲಿದ್ದಾರೆ.

ಒಂದೇ‌ ದಿನದಲ್ಲಿ ಮೂರು ಕ್ಷೇತ್ರಗಳಲ್ಲಿ ‌ಸಂಚರಿಸಿ ದೇವೇಂದ್ರ ಫಡ್ನವಿಸ್ ಮತಬೇಟೆ ನಡೆಸಲಿದ್ದು, ಮರಾಠಿ ಭಾಷಿಕ ಪ್ರದೇಶದಲ್ಲಿ ಎರಡನೇ ದಿನವೂ ಕೇಂದ್ರ ‌ಸಚಿವ ನಿತಿನ್ ‌ಗಡ್ಕರಿ ಮತಬೇಟೆ ಮಾಡಲಿದ್ದಾರೆ. ಹುಕ್ಕೇರಿ, ಕಾಗವಾಡ ಕ್ಷೇತ್ರಗಳ ಬಳಿಕ ಇಂದು ನಿಪ್ಪಾಣಿಯಲ್ಲಿ ನಿತಿನ್ ‌ಗಡ್ಕರಿ ಪ್ರಚಾರ ಸಭೆ, ನಿಪ್ಪಾಣಿ ‌ಬಿಜೆಪಿ ಅಭ್ಯರ್ಥಿ ಶಶಿಕಲಾ ‌ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ನಿತಿನ್ ಗಡ್ಕರಿ ಭಾಗಿಯಾಗಲಿದ್ದಾರೆ. ‌ನಿನ್ನೆಯಷ್ಟೇ ಎಂಇಎಸ್ ‌ಪರ ಪ್ರಚಾರ ಸಭೆ ನಡೆಸಿರುವ ಶಿವಸೇನೆ ವಕ್ತಾರ ‌ಸಂಜಯ್ ರಾವುತ್ ಬೆಳಗಾವಿಯ ಸಮಾದೇವಿಗಲ್ಲಿಯಲ್ಲಿ ಎಂಇಎಸ್ ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ‌ಭಾಗಿಯಾಗಿದ್ದರು‌. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

Share This Article