ಬೆಳಗಾವಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ (Karnataka Maharashtra Border Dispute) ಸಂಬಂಧಿಸಿದಂತೆ ಬರೋಬ್ಬರಿ 25 ವರ್ಷಗಳ ನಂತರ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ನಡೆಸಲಿದೆ.
ಬೆಳಗಾವಿ ಸೇರಿ ಕರ್ನಾಟಕದ 865 ನಗರ, ಪಟ್ಟಣ, ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ಜ.21 ರಂದು ನಡೆಯಲಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಗಡಿವಿವಾದ ಅರ್ಜಿ ವಿಚಾರಣೆ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಅಲರ್ಟ್ ಅಗಿದ್ದು ಗಡಿ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ (HK Patil) ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆದಿದೆ. ಇದನ್ನೂ ಓದಿ: ಕೋರ್ಟ್ ಆದೇಶವಿದ್ರೂ ಪವಿತ್ರಾ ಗೌಡಗೆ ಮನೆಯೂಟ ಇಲ್ಲ!
ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಹಿಂಚಗೇರಿ, ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಪರ ವಕಾಲತ್ತು ವಹಿಸುವ ನ್ಯಾಯವಾದಿ ನಿಶಾಂತ ಪಾಟೀಲ್, ಗಡಿ ಮತ್ತು ನದಿ ಸಂರಕ್ಷಣಾ ಆಯೋಗ ಸದಸ್ಯ ಆರ್.ಬಿ ಧರ್ಮೆಗೌಡ, ಕಾನೂನು ಇಲಾಖೆ ಅಪರ ಕಾರ್ಯದರ್ಶಿ ಕೆ.ಎಲ್ ಅಶೋಕ ಸೇರಿ ಹಲವರು ಭಾಗಿಯಾಗಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ಸಂಬಂಧ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಪ್ರಬಲ ವಾದ ಮಂಡಿಸಲು ಕರ್ನಾಟಕ ಕಾನೂನು ತಂಡ ಸಿದ್ಧತೆ ನಡೆಸಿದೆ.

