ಮುಂಬೈ: ಮಹಾರಾಷ್ಟ್ರ (Maharashtra) ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉಭಯ ಸಿಎಂಗಳ ಸಭೆ ನಡೆಸಲಾಗಿತ್ತು. ಆದರೆ, ಕೇಂದ್ರ ಗೃಹಸಚಿವ ಅಮಿತ್ ಶಾ ( Amit Shah) ಸೂಚನೆಗೂ ಕ್ಯಾರೇ ಎನ್ನದ ಮಹಾರಾಷ್ಟ್ರದ ಎನ್‌ಸಿಪಿ (NCP) ಶಾಸಕರು ಮಹಾರಾಷ್ಟ್ರ ವಿಧಾನಸಭೆಗೆ ಕಲಾಪಕ್ಕೆ ನಾಡದ್ರೋಹಿ ಘೋಷವಾಕ್ಯದ ಟೋಪಿ ಧರಿಸಿ ಹಾಜರಾಗಿದ್ದಾರೆ.
ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಎಂಬ ಬರಹದ ಟೋಪಿ ಧರಿಸಿದ್ದಾರೆ. ಸದನದಲ್ಲಿ ಕರ್ನಾಟಕದ ವಿರುದ್ಧ ಸುಳ್ಳು ಆರೋಪಗಳ ಸುರಿಮಳೆ ಮಾಡಿದ್ದು, ಕರ್ನಾಟಕದ ಸಿಎಂ ಹೇಳಿಕೆ ವಿರೋಧಿಸಿ ನಾವು ಕೊಲ್ಲಾಪುರದಲ್ಲಿ ಧರಣಿ ನಡೆಸಿದ್ದೆವು. ಆಗ ಮರಾಠಿ ಭಾಷಿಕರು ನಮ್ಮ ಬಳಿ ಬಂದು ಅಳಲು ತೋಡಿಕೊಂಡು ಮಹಾಮೇಳಾವ್‌ಗೆ ಆಹ್ವಾನ ನೀಡಿದ್ದರು. ನಾವು ನಮ್ಮ ದೇಶದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹದು. ಕರ್ನಾಟಕ (Karnataka) ಸರ್ಕಾರದಿಂದ ಅನ್ಯಾಯ, ಅತ್ಯಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಒಬ್ಬನೇ ಒಬ್ಬ ಮರಾಠಿ ಭಾಷಿಕರನ್ನು ಮನೆಯಿಂದ ಹೊರ ಬರಲು ಬಿಟ್ಟಿಲ್ಲ. 865 ಗ್ರಾಮಗಳ ಜನ ಮಹಾರಾಷ್ಟ್ರ ಸೇರಲು ಬಯಸಿ ಠರಾವು ಹೊರಡಿಸಿದ್ದಾರೆ. ನಾನು ಬೆಳಗಾವಿಗೆ ಹೊರಟರೆ ಅಲ್ಲಿ ಮಿಲಿಟರಿ ತಂದು ನಿಲ್ಲಿಸಿದರು. ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್ ಉದ್ಧಟತನ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ
ಇತ್ತ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಕರ್ನಾಟಕ, ಮಹಾರಾಷ್ಟ್ರ ಎರಡೂ ರಾಜ್ಯಗಳು ಪರಸ್ಪರ ಪ್ರದೇಶಗಳ ಬೇಡಿಕೆ ಇಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದರು. ಆದರೂ ವಿಧಾನಸಭೆ ಕಲಾಪದಲ್ಲಿ ನಾಡದ್ರೋಹಿ ಘೋಷಣೆ ಬರಹದ ಟೋಪಿ ಧರಿಸಿ ವಿಧಾನಸಭೆ ಕಲಾಪಕ್ಕೆ ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್ ಹಾಜರಾಗಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ಹೋಗೋ ದಾರಿಯಲ್ಲಿ ಗಾಯಾಳುಗೆ ಮದ್ಯ ನೀಡಿ, ತಾನೂ ಕುಡಿದ ಅಂಬುಲೆನ್ಸ್ ಚಾಲಕ