ಮುಂಬೈ: ವ್ಯಕ್ತಿಯೋರ್ವನಿಗೆ ಕೋವಿಡ್ ಲಸಿಕೆ ಬದಲು ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗಿದೆ. ಇದರಿಂದ ಆ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‍ನನ್ನು ಅಮಾನತು ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
Advertisement
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ನಿರ್ಲಕ್ಷ್ಯ ವಹಿಸಿದ ವೈದ್ಯ ಹಾಗೂ ನರ್ಸ್‍ನನ್ನು ಅಮಾನತು ಮಾಡಲಾಗಿದೆ. ಇಲ್ಲಿನ ಸ್ಥಳೀಯರಾದ ರಾಜಕುಮಾರ್ ಯಾದವ್ ಕಲ್ವಾದಲ್ಲಿರುವ ಸರ್ಕಾರಿ ಮೆಡಿಕಲ್ ಸೆಂಟರ್‍ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದರು. ಆದರೆ ಅಲ್ಲಿ ಆ್ಯಂಟಿ ರೇಬಿಸ್ ಲಸಿಕೆಯ ಕ್ಯೂನಲ್ಲಿ ನಿಂತ ಅವರಿಗೆ ವೈದ್ಯರು ಯಾವ ಪ್ರಶ್ನೆಯನ್ನೂ ಕೇಳದೆ ಆ್ಯಂಟಿ ರೇಬಿಸ್ ಲಸಿಕೆ ಹಾಕಿದ್ದಾರೆ.
Advertisement
Advertisement
ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕ ಎರಡನೇ ಲಸಿಕೆಗೆ ಯಾವಾಗ ಬರಬೇಕೆಂದು ಕೇಳಿದಾಗ ಅಲ್ಲಿನ ಸಿಬ್ಬಂದಿ ಆತನಿಗೆ ನೀಡಿದ್ದು ರೇಬಿಸ್ ಲಸಿಕೆ ಎಂದು ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಆ ವ್ಯಕ್ತಿ ಬೇರೆ ವೈದ್ಯರ ಬಳಿ ಹೋಗಿ ವಿಷಯ ತಿಳಿಸಿದ್ದಾರೆ. ಆ ವ್ಯಕ್ತಿ ಆರೋಗ್ಯದಿಂದಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಆದರೆ ಯಾವ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ ಎಂಬುದನ್ನು ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಕ್ಕೆ ವೈದ್ಯರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್
Advertisement
ತನಗೆ ತಪ್ಪು ಲಸಿಕೆ ನೀಡಿದ ಬಗ್ಗೆ ರಾಜಕುಮಾರ್ ಯಾದವ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಜೆಕ್ಷನ್ ನೀಡಿದ ವೈದ್ಯೆ, ನರ್ಸ್‍ನನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ
ಈ ರೀತಿಯ ಘಟನೆಗಳು ನಮ್ಮ ಆಸ್ಪತ್ರೆಯಲ್ಲಿ ಹಿಂದೆ ನಡೆದಿಲ್ಲ, ಅವರು ತಪ್ಪಾಗಿ ಬೇರೆ ಕ್ಯೂನಲ್ಲಿ ನಿಂತಿದ್ದರಿಂದ ಈ ರೀತಿ ತಪ್ಪಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಭರವಸೆ ನೀಡಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೈದ್ಯರ ತಪ್ಪಿನಿಂದ ಆ ವ್ಯಕ್ತಿಗೆ ಏನಾದರೂ ತೊಂದರೆ ಆಗಿದ್ದರೆ ಯಾರು ಜವಾಬ್ದಾರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ..