Maharashtra | ʻತ್ರಿಭಾಷಾ ಸೂತ್ರʼ ಆದೇಶ ಹಿಂಪಡೆದ ʻಮಹಾʼ ಸರ್ಕಾರ

Public TV
2 Min Read
Eknath Shindhe Devendra Fadnavis

ಮುಂಬೈ: ರಾಜಕೀಯ ಗದ್ದಲ ಹಾಗೂ ಸಾರ್ವಜನಿಕರ ವಿರೋಧದ ನಡುವೆ ಮಹಾರಾಷ್ಟ್ರ ಸರ್ಕಾರ (Maharashtra government) ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ (Third language) ಪರಿಚಯಿಸುವ ನಿರ್ಧಾರವನ್ನು (ತ್ರಿಭಾಷಾ ಸೂತ್ರ) ಹಿಂತೆಗೆದುಕೊಂಡಿದೆ.

ರಾಜ್ಯ ವಿಧಾನಸಭೆಯ ಮಳೆಗಾಲ ಅಧಿವೇಶನಕ್ಕೂ ಮುನ್ನವೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ (Devendra Fadnavis) ಈ ನಿರ್ಧಾರ ಪ್ರಕಟಿಸಿದ್ದಾರೆ. ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಗೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪುರಿ ಕಾಲ್ತುಳಿತದಲ್ಲಿ ಮೂವರ ಸಾವು ಪ್ರಕರಣ – ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ

hindi

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಯ ಭಾಗವಾಗಿ 1ರಿಂದ 5ನೇ ತರಗತಿವರೆಗೆ ಹಿಂದಿಯನ್ನು ಭಾಷೆಯಾಗಿ ಪರಿಚಯಿಸಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 3 ರಫೇಲ್‌ ಸೇರಿ 5 ಯುದ್ಧ ವಿಮಾನಗಳನ್ನ ಪಾಕ್‌ ಹೊಡೆದಿದೆ – ಐಎಎಫ್‌ ಅಧಿಕಾರಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್‌ ವಾಗ್ದಾಳಿ

ರಾಜ್ಯದಲ್ಲಿ 1ನೇ ತರಗತಿಯಿಂದ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಸರ್ಕಾರ ಈ ವರ್ಷದ ಏಪ್ರಿಲ್ ಮತ್ತು ಜೂನ್‌ನಲ್ಲಿ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ. ಅಲ್ಲದೇ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಪರಿಶೀಲಿಸಲು ಶಿಕ್ಷಣ ತಜ್ಞ ನರೇಂದ್ರ ಜಾಧವ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರ್ಧಶತಕ ಗಳಿಸುವ ಮುನ್ನವೇ ಬಂದ ಜವರಾಯ – ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಹಾರಿತು ಪ್ರಾಣಪಕ್ಷಿ

Devendra Fadnavis

ಯಾವ ತರಗತಿಯಿಂದ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಬಹುದು ಎಂಬುದರ ಕುರಿತು ಈ ಸಮಿತಿ ಮೂರು ತಿಂಗಳಲ್ಲಿ ಶಿಫಾರಸು ಮಾಡಲಿದೆ. ಸಮಿತಿಯ ಇತರ ಸದಸ್ಯರನ್ನು ಶೀಘ್ರವೇ ನೇಮಿಸಲಾಗುವುದು. ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಆಗಿದ್ದಾಗ ನೇಮಿಸಲಾಗಿದ್ದ ಡಾ. ರಘುನಾಥ್ ಮಶೇಲ್ಕರ್ ಸಮಿತಿಯು ತ್ರಿಭಾಷಾ ನೀತಿಯ ಭಾಗವಾಗಿ ಮರಾಠಿ, ಇಂಗ್ಲಿಷ್ ಮತ್ತು ಹಿಂದಿಯನ್ನು 1ರಿಂದ 12ನೇ ತರಗತಿ ವರೆಗೆ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಅದನ್ನು ಠಾಕ್ರೆ ಸ್ವೀಕರಿಸಿದ್ದರು. ಸಂಪುಟದ ಮುಂದೆಯೂ ಇಡಲಾಗಿತ್ತು. ಆಗ ಈ ವರದಿ ತಿರಸ್ಕರಿಸದ ಅವರು, ಈ ನೀತಿಯನ್ನು ಜಾರಿಗೊಳಿಸಲು ಸಮಿತಿಯೊಂದನ್ನೂ ರಚಿಸಿದ್ದರು’ ಎಂದು ಫಡಣವೀಸ್ ವಿವರಿಸಿದರು.

ಈಗ ಠಾಕ್ರೆ ಅವರು ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಿದ್ದಾರೆ. ಹೀಗೆ ಅವರು ಭಾಷೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

Share This Article