ಮುಂಬೈ: 50-50 ಸರ್ಕಾರಕ್ಕೆ ಪಟ್ಟು ಹಿಡಿದು ಬಿಜೆಪಿಯಿಂದ ದೂರವಾಗಿರುವ ಶಿವಸೇನೆ ಈಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹರಸಾಹಸ ಪಡುತ್ತಿದೆ. ಈ ಬೆನ್ನಲ್ಲೇ ಇದೇ ಸೂತ್ರಕ್ಕೆ ಎನ್‍ಸಿಪಿ ಪಟ್ಟು ಹಿಡಿದಿದ್ದು, ಕಾಂಗ್ರೆಸ್ ಭಾರೀ ಬೇಡಿಕೆ ಇಟ್ಟು ಶಿವ ಸೇನೆಗೆ ಶಾಕ್ ನೀಡಿದೆ.
ಹೌದು. ಎನ್‍ಸಿಪಿ, ಕಾಂಗ್ರೆಸ್ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದರೂ ಅಧಿಕೃತವಾಗಿ ಶಿವಸೇನೆಯ ಜೊತೆ ಸರ್ಕಾರ ನಡೆಸುತ್ತೇವೆ ಎಂಬ ಹೇಳಿಕೆ ನೀಡಿರಲಿಲ್ಲ. ಇದರ ಬೆನ್ನಲ್ಲೇ ಈಗ ರಾಜ್ಯಪಾಲರ ಶಿಫಾರಸಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತ ಜಾರಿಗೆ ಬಂದಿದೆ.
Advertisement
#Breaking | Inside details of Maharashtra Govt. formation.@NCPspeaks pushes 50-50 formula, while @INCIndia demands 11 cabinet berths. NCP also demands CM’s post for 2.5 years.
TIME NOW’s Aruneel & Kajal with details. | #MahaMilawatFlops pic.twitter.com/gT2BTtnODm
— TIMES NOW (@TimesNow) November 12, 2019
Advertisement
ಕರ್ನಾಟಕದಲ್ಲಿ ಫಲಿತಾಂಶ ಬರುತ್ತಿರುವಾಗಲೇ ಜೆಡಿಎಸ್ ಜೊತೆ ಮೈತ್ರಿ ಮಾತುಕತೆ ನಡೆಸಿದ್ದ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಬಹಳ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಿದೆ. ಈ ಮಧ್ಯೆ ಶಿವಸೇನೆ ಜೊತೆ ಎನ್‍ಸಿಪಿ ಮತ್ತು ಕಾಂಗ್ರೆಸ್ ಬೇಡಿಕೆ ಇಟ್ಟಿದ್ದು ಮೈತ್ರಿ ಮಾತುಕತೆ ನಡೆಯುತ್ತಲೇ ಇದೆ.
Advertisement
ಬೇಡಿಕೆ ಏನು?
ಈ ಹಿಂದೆ ಶಿವಸೇನೆ ಬಿಜೆಪಿ ಮುಂದೆ ಇಟ್ಟಿದ್ದ ಎರಡೂವರೆ ವರ್ಷಗಳ ಮುಖ್ಯಮಂತ್ರಿ ಪಟ್ಟಕ್ಕೆ ಎನ್‍ಸಿಪಿ ಜೋತು ಬಿದ್ದಿದೆ. ಜೊತೆಗೆ ಕಾಂಗ್ರೆಸ್ ಕೂಡ 13 ಕ್ಯಾಬಿನೆಟ್ ಖಾತೆಯ ಜೊತೆ ಸ್ಪೀಕರ್ ಸ್ಥಾನವನ್ನು ನಮಗೆ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಈ ಮೂಲಕ ಮೊದಲ ಎರಡೂವರೆ ವರ್ಷ ಶಿವಸೇನೆಗೆ ಮುಖ್ಯಮಂತ್ರಿ ಪಟ್ಟ ಸಿಗಲಿದೆ. ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಎನ್‍ಸಿಪಿಗೆ ಬಿಟ್ಟುಕೊಡಬೇಕು. ಈ ಸೂತ್ರವನ್ನು ಪಾಲಿಸದಿದ್ದರೆ ಮೈತ್ರಿ ಸಾಧ್ಯವಿಲ್ಲ ಎಂದು ಶರದ್ ಪವಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
Advertisement
ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೋಮವಾರ ರಾತ್ರಿ ಎನ್‍ಸಿಪಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿ ರಾತ್ರಿ 8:30ರ ವರೆಗೆ ಗಡುವು ನೀಡಿದ್ದರು. ಈ ಗಡುವು ಮುಗಿಯುವುದರ ಒಳಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರ ಶಿಫಾರಸು ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ತುರ್ತು ಒಪ್ಪಿಗೆ ನೀಡಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದು ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. ರಾಷ್ಟ್ರಪತಿ ಆಡಳಿತಕ್ಕೆ ಶಿವಸೇನೆ ವಿರೋಧ ವ್ಯಕ್ತಪಡಿಸಿದ್ದು ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.
ರಾಷ್ಟ್ರಪತಿ ಆಡಳಿತ ಜಾರಿ ಯಾಕೆ?
ಚುನಾವಣಾ ಫಲಿತಾಂಶ ಬಂದು 19 ದಿನವಾದರೂ ಇಲ್ಲಿಯವರೆಗೆ ಯಾರೂ ಸರ್ಕಾರ ರಚನೆ ಮಾಡಿಲ್ಲ. ಇದು ಮೊದಲ ಕಾರಣವಾದರೆ ಎರಡನೆಯದು ಎಲ್ಲ ಪಕ್ಷಗಳಿಗೆ ಸರ್ಕಾರ ರಚಿಸಲು 24 ಗಂಟೆಗಳ ಸಮಯವನ್ನು ಮಾತ್ರ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಮಯವನ್ನು ಮುಂದೂಡಲು ಸಾಧ್ಯವಿಲ್ಲ. ಎನ್‍ಸಿಪಿಗೆ ಇಂದು ರಾತ್ರಿ 8:30ರವರೆಗೆ ಸಮಯವನ್ನು ರಾಜ್ಯಪಾಲರು ನೀಡಿದ್ದರು. ಆದರೆ ಎನ್‍ಸಿಪಿ ಈ ಅವಧಿಯನ್ನು ಮೂರು ದಿನಕ್ಕೆ ವಿಸ್ತರಿಸಬೇಕೆಂದು ಕೇಳಿಕೊಂಡಿತ್ತು. ರಾಜ್ಯಪಾಲರು ಮೂರು ದಿನಗಳ ಕಾಲ ಸಮಯ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಶಿಫಾರಸು ಮಾಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
ಶಿವಸೇನೆ ಜೊತೆ ಸರ್ಕಾರ ರಚಿಸುವ ಸಂಬಂಧ ಕಾಂಗ್ರೆಸ್ ಮತ್ತು ಎನ್‍ಸಿಪಿ ನಿರ್ಧಾರ ಅಂತಿಮವಾಗಿಲ್ಲ. ಎನ್‍ಸಿಪಿ ಮೈತ್ರಿಗೆ ಸಿದ್ಧ ಎಂದಿದ್ದರೂ ಕಾಂಗ್ರೆಸ್ ಒಪ್ಪಿಗೆ ನೀಡದ ಪರಿಣಾಮ ಸರ್ಕಾರ ರಚನೆಯ ಬಗ್ಗೆ ಅನುಮಾನ ಎದ್ದಿತ್ತು.
ಇಂದು ಮಹಾ ಕಾಂಗ್ರೆಸ್ ನಾಯಕರ ಜೊತೆ ದೆಹಲಿಯ ನಾಯಕರು ಸಭೆ ನಡೆಸುತ್ತಿದ್ದು ಇನ್ನೂ ಅಧಿಕೃತವಾಗಿ ಮೈತ್ರಿಗೆ ಒಪ್ಪಿಗೆ ಪ್ರಕಟಿಸಿಲ್ಲ. ಹೀಗಾಗಿ ವಿಧಾನಸಭಾ ಅವಧಿ ಮುಕ್ತಾಯಗೊಂಡಿದ್ದರೂ ಯಾವುದೇ ಸ್ಥಿರ ಸರ್ಕಾರ ರಚನೆಯಾಗದ ಪರಿಣಾಮ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.
Sushil Kr Shinde, Congress: There's no issue of Congress being late, we've been alert since beginning. We had asked them (NCP) if they've sent a letter(to Governor). Things will have to be done simultaneously, they're our partner. Whatever decision is taken,it'll be done together pic.twitter.com/4g9eFHXxLy
— ANI (@ANI) November 12, 2019
ಎನ್‍ಸಿಪಿ ನಾಯಕ ನವಾಬ್ ಮಲ್ಲಿಕ್ ಪ್ರತಿಕ್ರಿಯೆ ಇಂದು ನಾವು ಸರ್ಕಾರ ರಚನೆ ಸಂಬಂಧ ಸಭೆ ನಡೆಸಿದ್ದೇವೆ. ರಾಜ್ಯಪಾಲರು ನಮಗೆ ಇಂದು ರಾತ್ರಿ 8:30ರವರೆಗೆ ಸಮಯ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್, ಕೆಸಿ ವೇಣುಗೋಪಾಲ್ ಅವರು ಮುಂಬೈನಲ್ಲಿ ಸಂಜೆ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದರು.