ಮುಂಬೈನಲ್ಲಿ ಡೀಸೆಲ್‌ ಬೆಲೆ 2, ಪೆಟ್ರೋಲ್‌ ಬೆಲೆ 65 ಪೈಸೆ ಇಳಿಕೆ

Public TV
0 Min Read
PETROL 1

ಮುಂಬೈ: ಮಹಾರಾಷ್ಟ್ರದಲ್ಲಿರುವ (Maharashtra) ಮಹಾಯುತಿ ಸರ್ಕಾರ ಬಜೆಟ್‌ನಲ್ಲಿ ಮುಂಬೈ ಭಾಗದಲ್ಲಿ ಡೀಸೆಲ್‌ (Diesel) ಮತ್ತು ಪೆಟ್ರೋಲ್‌ (Petrol) ಮೇಲಿನ ತೆರಿಗೆಯನ್ನು ಇಳಿಸಿದೆ.

ಡೀಸೆಲ್‌ ಮೇಲಿದ್ದ 24% ತೆರಿಗೆಯನ್ನು 21% ಇಳಿಕೆ ಮಾಡಿದ್ದು ಪ್ರತಿ ಲೀಟರ್‌ ಡೀಸೆಲ್‌ ಬೆಲೆ 2 ರೂ. ಇಳಿಕೆಯಾಗಲಿದೆ. ಪೆಟ್ರೋಲ್‌ ಮೇಲಿದ್ದ 26% ತೆರಿಗೆಯನ್ನು 25% ಇಳಿಕೆ ಮಾಡಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 65 ಪೈಸೆ ಇಳಿಕೆಯಾಗಿದೆ.

ಜೂನ್‌ 28 ರಂದು ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 104.21 ರೂ. ಇದ್ದರೆ ಡೀಸೆಲ್‌ ಬೆಲೆ 92.15 ರೂ. ಇದೆ.

Share This Article