ಬೆಳಗಾವಿ: ಮಹಾರಾಷ್ಟ್ರ ಸರ್ಕಾರ (Maharashtra Government) ಅನಗತ್ಯವಾಗಿ ಮೇಲಿಂದ ಮೇಲೆ ಕಾಲ್ಕೆರೆಯುವ ಕೆಲಸ ಮಾಡ್ತಿದೆ. ಇದು ಷಡ್ಯಂತ್ರವಾಗಿದ್ದು, ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನ, ಗೌರವ ಕೆಣಕುವ ಕೆಲಸ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.
ನಗರದ ಕಾಂಗ್ರೆಸ್ (Congress) ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಎಐಸಿಸಿ ಅಧ್ಯಕ್ಷ, ನಮ್ಮೆಲ್ಲರ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ಮೊದಲ ಬಾರಿ ಕರ್ನಾಟಕಕ್ಕೆ ಬರ್ತಿದ್ದಾರೆ. ಮಾ.20ರಂದು ಬೆಳಗಾವಿ ನಗರದಲ್ಲಿ ರಾಜ್ಯಮಟ್ಟದ ಯುವ ಕಾಂಗ್ರೆಸ್ ವತಿಯಿಂದ ಯುವಕರ ರ‍್ಯಾಲಿಯನ್ನು ಏರ್ಪಾಡು ಮಾಡಲಾಗಿದೆ. ಅವರನ್ನೆಲ್ಲ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇವತ್ತು ಪೂರ್ವಸಿದ್ಧತೆಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು, ಬ್ಲಾಕ್ ಕಮಿಟಿ ಅಧ್ಯಕ್ಷರು, ಶಾಸಕರು ಮಾಜಿ ಶಾಸಕರು, ಟಿಕೆಟ್ ಬಯಸಿ ಆಕಾಂಕ್ಷಿಗಳು ಇವರೆಲ್ಲರ ಸಭೆ ಬೆಳಗಾವಿಯಲ್ಲಿ ಕರೆದಿದ್ದೆವು. ಐತಿಹಾಸಿಕ ರ‍್ಯಾಲಿ ಆಗಬೇಕು ಎಂದು ತೀರ್ಮಾನ ಮಾಡಲಾಗಿದೆ. ಮಾ.20ರ ಬೆಳಗ್ಗೆ 11ಕ್ಕೆ ಆರಂಭವಾಗಿ ಎರಡು ಗಂಟೆಯವರೆಗೆ ನಡೆಯುತ್ತದೆ. ಸುಮಾರು ನಾಲ್ಕೈದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗಿಂತ ಫೈಟರ್ ರವಿ ಹೆಚ್ಚಾ? – ಡಿಕೆಶಿಗೆ ಅಶ್ವಥ್ ನಾರಾಯಣ್ ಟಾಂಗ್
ಚುನಾವಣಾ ಹಿನ್ನೆಲೆಯಲ್ಲಿ ನಡೆಯುವ ರ‍್ಯಾಲಿ ಆಗಿದ್ದರಿಂದ ಚುನಾವಣೆಗೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಮಾಡ್ತಾರೆ. ಇಡೀ ರಾಜ್ಯಕ್ಕೆ ಚುನಾವಣೆ ಸಂದೇಶ ಕೊಡುವಂತಹ ಪ್ರಯತ್ನ ರಾಹುಲ್ ಗಾಂಧಿ ಮಾಡ್ತಾರೆ. ಇದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಎಲ್ಲರೂ ಉತ್ಸಾಹದಿಂದ ಹೆಚ್ಚು ಯವಕರು, ಕಾರ್ಯಕರ್ತರನ್ನು ಕರೆದುಕೊಂಡು ಬರಲು ಒಪ್ಪಿದ್ದಾರೆ. ಮಹಾರಾಷ್ಟ್ರ ಸರ್ಕಾರ ಅನಗತ್ಯವಾಗಿ ಮೇಲಿಂದ ಮೇಲೆ ಕಾಲ್ಕೆರೆಯುವ ಕೆಲಸ ಮಾಡ್ತಿದೆ. ಇದೊಂದು ಷಡ್ಯಂತ್ರವಾಗಿದೆ. ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನ, ಗೌರವ ಕೆಣಕುವ ಕೆಲಸ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿ ರಾಜ್ಯಗಳ ನಿರ್ಮಾಣವಾಗಿದೆ. ಭಾಷಾವಾರು ರಾಜ್ಯ ವಿಂಗಡಣೆ ಆದ ಮೇಲೆ ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಿದೆ. ಮಹಾಜನ್ ಆಯೋಗ ರಚನೆಯಾಗಿ ವರದಿ ಬಂದಿದೆ. ನಾವು ಮಹಾಜನ್ ವರದಿ ಅಂತಿಮ ಅಂತಾ ಒಪ್ಪಿಕೊಂಡಿದ್ದೇವೆ. ಮಹಾಜನ್ ಅಲ್ಲಿಯೇ ಜಡ್ಜ್ ಆದವರು. ಅವರು ವರದಿ ಕೊಟ್ಟಮೇಲೆ ಒಪ್ಪಿದ್ದೇವೆ. ಆದರೆ ಈಗ ಇತ್ತೀಚೆಗೆ 865 ಹಳ್ಳಿಗಳಲ್ಲಿ 54 ಕೋಟಿ ಬಿಡುಗಡೆ ಮಾಡಿ ಆರೋಗ್ಯ ಯೋಜನೆ ಘೋಷಣೆ ಮಾಡಿದ್ದಾರೆ. ಇಟ್ ಇಸ್ ನನ್ ಆಫ್ ದೇರ್ ಬ್ಯುಸಿನೆಸ್. ಇನ್ನೊಂದು ರಾಜ್ಯದ ಹಳ್ಳಿಗಳಿಗೆ ಕಾರ್ಯಕ್ರಮ ಘೋಷಣೆ ಮಾಡಿದೆ. ಸಂವಿಧಾನ ಬಿಕ್ಕಟ್ಟು ನಿರ್ಮಾಣ ಮಾಡಲು ಹೊರಟಿದ್ದಾರೆ. ಒಂದೆಡೆ ಕನ್ನಡಿಗರ ಸ್ವಾಭಿಮಾನ ಕೆಣಕುವಂತದ್ದು, ಇನ್ನೊಂದೆಡೆ ಕನ್ನಡದ ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸ ಆಗ್ತಿದೆ. ಮತ್ತೊಂದೆಡೆ ಒಕ್ಕೂಟ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ. ನಾನು ಇವರ ಪ್ರಯತ್ನ ಕಟುವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.
ಕರ್ನಾಟಕದ ಜನ ಶಾಂತವಾಗಿದ್ದಾರೆ ಎಂದ್ರೆ ವೀಕ್ ಆಗಿದ್ದೀವಿ ಅಂತಲ್ಲ. ಕನ್ನಡ ನೆಲ-ಜಲ ರಕ್ಷಣೆಗೆ ಯಾವುದೇ ತ್ಯಾಗ ಮಾಡಲು ಎಲ್ಲ ಕನ್ನಡಿಗರು ಸಿದ್ಧರಿದ್ದೇವೆ. ಎಲ್ಲ ಕನ್ನಡಿಗರು ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಬಿಟ್ಟುಕೊಡಲು ಆಗಲ್ಲ. ನೆಲ-ಜಲ-ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಯಾರೂ ಕೂಡ ಇನ್ನೊಂದು ರಾಜ್ಯದಲ್ಲಿ ಇಂಟರ್‌ಫಿಯರ್ ಆಗಬಾರದು. ಮಹಾರಾಷ್ಟ್ರದ ಕೆಲವು ಹಳ್ಳಿಗಳ ಜನ ಕರ್ನಾಟಕ ಸೇರಲು ರೆಡಿ ಇದ್ದಾರೆ. ನಾವು ಮಧ್ಯಪ್ರವೇಶ ಮಾಡಲು ಆಗುತ್ತಾ? ಇಟ್ ಇಸ್ ನಾಟ್ ಫೇರ್. ನಾವೆಲ್ಲ ಭಾರತೀಯರು, ಶಾಂತಿಯಿಂದ ಬದುಕಬೇಕು. ಯಾವುದೇ ವಿವಾದ ಇಲ್ಲದೇ ಇದ್ದರೂ ವಿವಾದ ಮಾಡಲು ಯತ್ನವಾಗಿದೆ. ಇಷ್ಟೆಲ್ಲ ಮಾಡಿದರೂ ಕೂಡ ಸಿಎಂ ಮೌನವಾಗಿ ಇದ್ದಾರೆ. ಅವರು ಕನ್ನಡಿಗರ ರಕ್ಷಣೆ ಮಾಡುವಲ್ಲಿ, ಕರ್ನಾಟಕ ರಾಜ್ಯದ ಹಕ್ಕು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಅದನ್ನ ತಡೆಗಟ್ಟುವ ಕೆಲಸ ಮಾಡಿಲ್ಲ. ಹಾಗಾದ್ರೆ ಇವರು ಅಧಿಕಾರದಲ್ಲಿ ಏಕೆ ಇರಬೇಕು. ನೀವು ಕನ್ನಡಿಗರ ರಕ್ಷಣೆ ಮಾಡಲಾಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಲು ಆಗ್ರಹಿಸುತ್ತೇನೆ. ಇದು ಒಬ್ಬ ವ್ಯಕ್ತಿ ಪ್ರಶ್ನೆ ಅಲ್ಲ. ಆರೂವರೆ ಕೋಟಿ ಕನ್ನಡಿಗರ ಇಡೀ ಕರ್ನಾಟಕದ ಪ್ರಶ್ನೆಯಾಗಿದೆ. ಕೂಡಲೇ ಮಹಾರಾಷ್ಟ್ರ ಸರ್ಕಾರ ಈ ಕಾರ್ಯಕ್ರಮ ವಾಪಸ್ ಪಡೆಯಬೇಕು ಒತ್ತಾಯಿಸಿದರು. ಇದನ್ನೂ ಓದಿ: ಆಜಾನ್ ಹೇಳಿಕೆ ವಿರುದ್ಧ ಎಷ್ಟೇ ಪ್ರತಿರೋಧ ಬಂದ್ರೂ ನಾನು ಜನ ಸಾಮಾನ್ಯನ ನೋವು ಹೇಳೋನೆ: ಈಶ್ವರಪ್ಪ
ಒಕ್ಕೂಟ ವ್ಯವಸ್ಥೆ ಕಾಪಾಡಬೇಕಿರುವ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಅವರು ಬುದ್ದಿ ಕಲಿಯಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ, ಅಶಾಂತಿ ನಿರ್ಮಾಣ ಮಾಡುವಂತಹ ಕೆಲಸ ಮಾಡಬಾರದು. ಅನಗತ್ಯವಾಗಿ ರಾಜ್ಯ ಒಡೆಯುವ ಆಲೋಚನೆ ಮಾಡುವ ದುಷ್ಟ ಶಕ್ತಿಗೆ ಕೈ ಹಾಕದೇ ಹೋದ್ರೆ ಒಕ್ಕೂಟ ವ್ಯವಸ್ಥೆ ಉಳಿಸಲು ಕಷ್ಟವಾಗುತ್ತದೆ. ಅಮಿತ್ ಶಾ, ಮೋದಿಗೆ ಒತ್ತಾಯ ಮಾಡ್ತೀನಿ. ಮಹಾರಾಷ್ಟ್ರ ಸರ್ಕಾರ ಈ ಕಾರ್ಯಕ್ರಮ ವಾಪಸ್ ಪಡೆಯಬೇಕು. ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕು. ಮಹಾರಾಷ್ಟ್ರ ಸರ್ಕಾರದ ಕುತಂತ್ರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದೆ ಬರಬೇಕು. ಆರ್ಟಿಕಲ್ 356 ಬಳಸಿ ಮಹಾರಾಷ್ಟ್ರ ಸರ್ಕಾರ ವಜಾ ಮಾಡಬೇಕು ಎಂದು ಆಗ್ರಹಿಸಿದರು.