ಶಿವಮೊಗ್ಗ: ಕಾಂಗ್ರೆಸ್ ಎಲ್ಲೆಲ್ಲಿ ಇದೆಯೋ, ಎಲ್ಲೆಲ್ಲಿ ಬೇರೆ ಬೇರೆ ಪಕ್ಷಗಳಿಗೆ ಬೆಂಬಲ ಕೊಟ್ಟಿದೆಯೋ ಅಲ್ಲಿ ಕಾಂಗ್ರೆಸ್ ಮುಟ್ಟಿದವರೆಲ್ಲಾ ಸರ್ವನಾಶ ಆಗುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾರಾಷ್ಟ್ರ ಸರ್ಕಾರ ಶೀಘ್ರ ಪತನವಾಗಲಿದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
Advertisement
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತಾ ಹುಡುಕುವಂತಹ ಸ್ಥಿತಿ ಇದೆ. ಅಲ್ಲಿ 3-4 ಸ್ಥಾನ ಉಳಿಸಿಕೊಂಡು ಸರ್ವನಾಶ ಆಗಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಈ ಸರ್ಕಾರ ಬಿದ್ದು ಹೋಗುತ್ತಿದೆ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದ ರಾಜ್ಯಪಾಲ, ಸಿಎಂಗೆ ಕೊರೊನಾ
Advertisement
Advertisement
ಮಹಾರಾಷ್ಟ್ರದಲ್ಲಿ ಈಗ ಇರುವ ಸರ್ಕಾರದಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲ. ಯಾವುದೇ ತಾಳ ಮೇಳ ಇಲ್ಲ. ಯಾರಿಗೂ ನಂಬಿಕೆ ಇಲ್ಲ. ಮುಖ್ಯಮಂತ್ರಿ ಅವರ ಮೇಲೆಯಂತೂ ನಂಬಿಯೇ ಇಲ್ಲದಾಗಿದೆ. ಹೀಗಾಗಿ ಬೇರೆ ಬೇರೆ ಪಕ್ಷದವರು ಬಿಜೆಪಿ ಜೊತೆ ಬರುತ್ತೇವೆ ಅಂದರೆ ಬೇಡ ಎನ್ನುವುದಕ್ಕೆ ಆಗಲ್ಲ. ಅವರಾಗಿ ಅವರೇ ನಮ್ಮ ಪಕ್ಷಕ್ಕೆ ಬರುತ್ತೇವೆ ಅಂದರೆ ಕರೆದುಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಇಬ್ಭಾಗದತ್ತ ಶಿವಸೇನೆ – ಮಹಾರಾಷ್ಟ್ರದಲ್ಲಿ ಮುಂದೇನಾಗಬಹುದು? ಅಂಕಿ ಸಂಖ್ಯೆ ಲೆಕ್ಕಾಚಾರ ಏನು?
Advertisement
ಮಹಾರಾಷ್ಟ್ರದಲ್ಲಿ ಈ ಹಿಂದೆ ಹಿಂದುತ್ವದ ಪರಿಸ್ಥಿತಿ ಇತ್ತು. ಬಾಳ್ ಠಾಕ್ರೆ ಅಂದರೆ ಹಿಂದುತ್ವದ ಬಗ್ಗೆ ಸಿಂಹ ಘರ್ಜನೆ. ಹಿಂದುತ್ವದ ಬಗ್ಗೆ ಬಾಳ್ ಠಾಕ್ರೆ ಅವರು ಹುಲಿ ಇದ್ದಂತೆ ಇದ್ದರು. ಆದರೆ ಅವರ ಪುತ್ರ ಉದ್ಧವ್ ಠಾಕ್ರೆ ಅವರದ್ದು ಹಿಂದುತ್ವದ ಬಗ್ಗೆ ಇಲಿ ಧೋರಣೆ ಆಗಿದೆ. ಹೀಗಾಗಿಯೇ ಮಹಾರಾಷ್ಟ್ರ ಸರ್ಕಾರ ಉಳಿಯುವುದಿಲ್ಲ ಎಂದು ಕಿಡಿಕಾರಿದರು.