ಮುಂಬೈ: ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ರಾಜಕಾರಣ ಕ್ಷಣಕ್ಷಣಕ್ಕೂ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದ್ದು, ಸೈದ್ಧಾಂತಿಕ ವಿರೋಧಿಯಾದ ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆ ಶಿವಸೇನೆ ಮಹಾಮೈತ್ರಿಗೆ ಮುಂದಾಗಿದೆ ಎನ್ನಲಾಗಿತ್ತು. ಆದರೆ ಸಂಜೆ 5 ವೇಳೆ ನಡೆದ ಸಭೆ ಬಳಿಕ ಮೈತ್ರಿಗೆ ಬೆಂಬಲ ನೀಡುವ ಕುರಿತು ಕಾಂಗ್ರೆಸ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಎನ್‍ಸಿಪಿಯೊಂದಿಗೆ ಮಾತುಕತೆ ನಡೆಸಲಾಗುವುದು ಎಂದಷ್ಟೇ ಹೇಳಿಕೆ ನೀಡಿದೆ. ಇತ್ತ ಬಿಜೆಪಿ ಸರ್ಕಾರ ರಚಿಸಲ್ಲ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಸರ್ಕಾರ ರಚನೆಗೆ ಮುಂದಾಗಿದ್ದ ಶಿವಸೇನೆ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‍ನಿಂದ ಬಾಹ್ಯ ಬೆಂಬಲ ಪಡೆಯಲು ಮುಂದಾಗಿತ್ತು. ಆದರೆ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಸರ್ಕಸ್ ಮುಂದುವರಿದಿದೆ. ಎನ್‍ಸಿಪಿ ನಾಯಕರ ಶರದ್ ಪವಾರ್ ಅವರ ನಡೆಯೂ ತೀವ್ರ ಕುತೂಹಲ ಮೂಡಿಸಿದೆ.
Advertisement
Maharashtra: Shiv Sena leader Aaditya Thackeray and other leaders of the party reach Raj Bhavan, in Mumbai. pic.twitter.com/6dL1yiMm9C
— ANI (@ANI) November 11, 2019
Advertisement
ಇಂದು ಸಂಜೆ 5 ಗಂಟೆ ವೇಳೆಗೆ ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ನಾಯಕರ ಜೊತೆ ಸರ್ಕಾರ ರಚನೆಗೆ ಬೆಂಬಲ ನೀಡುವ ಕುರಿತು ಚರ್ಚೆ ನಡೆಸಿತ್ತು. ಅಲ್ಲದೇ ಶಿವಸೇನೆ ನಾಯಕರ ಉದ್ಧವ್ ಠಾಕ್ರೆ ಅವರೊಂದಿಗೆ ಸೋನಿಯಾ ಗಾಂಧಿ ಅವರು ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಇದರ ನಡುವೆಯೇ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ, ಏಕ್‍ನಾಥ್ ಶಿಂಧೆ ನೇತೃತ್ವದ ಶಿವಸೇನೆ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡನೆ ಮಾಡಿದೆ.
Advertisement
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಆದಿತ್ಯ ಠಾಕ್ರೆ, ರಾಜ್ಯಪಾಲರಿಗೆ ಸರ್ಕಾರ ರಚನೆ ಮಾಡಲು ಮನವಿ ಮಾಡಿದ್ದು, 2 ದಿನಗಳ ಕಾಲಾವಕಾಶ ನೀಡಲು ಅವರು ನಿರಾಕರಿಸಿದ್ದಾರೆ. ಆದರೆ ಸರ್ಕಾರ ರಚನೆ ಮಾಡುವ ನಮ್ಮ ಮನವಿಯನ್ನು ನಿರಾಕರಿಸಿಲ್ಲ. ಮಹಾರಾಷ್ಟ್ರದಲ್ಲಿ ಸಮರ್ಥ ಸರ್ಕಾರ ರಚನೆ ಮಾಡುವುದು ಶಿವಸೇನೆಯ ಕರ್ತವ್ಯವಾಗಿದೆ. ಮುಂದಿನ 24 ಗಂಟೆಗಳಲ್ಲಿ ಜವಾಬ್ದಾರಿಯುತ ಸರ್ಕಾರ ರಚನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು. ಆದರೆ ಎನ್‍ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ಪಡೆಯುವ ಕುರಿತು ಯಾವುದೇ ಸ್ಪಷ್ಟ ಹೇಳಿಕೆಯನ್ನು ನೀಡಲಿಲ್ಲ.
Advertisement
ಸರ್ಕಾರ ರಚನೆಗೆ ಬಾಹ್ಯ ಬೆಂಬಲ ನೀಡಲು ಕಾಂಗ್ರೆಸ್ ಪಕ್ಷದ ಮುಂದಾಗಿದೆ ಎನ್ನಲಾಗಿದ್ದು, ಕೆಲ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಪ್ರಮುಖವಾಗಿ ವಿಧಾನಸಭಾ ಸ್ಪೀಕರ್ ಸ್ಥಾನ ನೀಡಲು ಪಟ್ಟು ಹಿಡಿದಿದೆ ಎಂಬ ಮಾಹಿತಿ ಲಭಿಸಿದೆ.
ಸೋನಿಯಾ ಗಾಂಧಿ ಅವರು ಮೈತ್ರಿ ಸರ್ಕಾರ ಕುರಿತು ಎನ್‍ಸಿಪಿ ನಾಯಕ ಶರದ್ ಪವರ್ ಅವರೊಂದಿಗೂ ಮಹತ್ವ ಮಾತುಕತೆ ನಡೆಸಿದ್ದಾರೆ. ಆರಂಭದಲ್ಲಿ ಮೈತ್ರಿಗೆ ಹಿಂದೇಟು ಹಾಕಿದ್ದ ಕಾಂಗ್ರೆಸ್, ಎನ್‍ಸಿಪಿ ಪಕ್ಷಗಳು ಶಿವಸೇನೆಗೆ ಷರತ್ತು ವಿಧಿಸಿತ್ತು. ಎನ್‍ಡಿಎ ಒಕ್ಕೂಟದಿಂದ ಹೊರ ಬಂದರೆ ಮಾತ್ರ ಮೈತ್ರಿಗೆ ಬೆಂಬಲ ನೀಡುವುದಾಗಿ ಹೇಳಿತ್ತು. ಸಿಎಂ ಸ್ಥಾನದ ಮೇಲೆ ಕಣ್ಣನ್ನು ಇಟ್ಟಿರುವ ಶಿವಸೇನೆ ಈ ಷರತ್ತನ್ನು ಒಪ್ಪಿಕೊಂಡಿದ್ದು ಈಗಾಗಲೇ ಮೋದಿ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆಯ ಸಚಿವ ಅರವಿಂದ ಸಾವಂತ್ ರಾಜೀನಾಮೆ ನೀಡಿದ್ದಾರೆ.
Delhi: Congress leaders AK Antony and Ahmed Patel arrive at 10 Janpath (Congress Interim President Sonia Gandhi's residence). Party's Maharashtra leaders have been called to Delhi for further discussions over the political situation in Maharashtra, the meeting to be held shortly. pic.twitter.com/J7NOuVshyS
— ANI (@ANI) November 11, 2019
ಈಗಾಗಲೇ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡಿದ್ದು, ಬಹುಮತ ಸಾಬೀತು ಪಡಿಸಲು ಸೂಚಿಸಿದ್ದಾರೆ. ಮೂಲಗಳ ಪ್ರಕಾರ ಮಹಾಮೈತ್ರಿಯಲ್ಲಿ ಮೂರು ಪಕ್ಷಗಳ ಪೈಕಿ ಶಿವಸೇನೆ ಅತಿ ದೊಡ್ಡ ಪಕ್ಷವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನ, ಎನ್‍ಸಿಪಿ ಮತ್ತು ಕಾಂಗ್ರೆಸ್ಸಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಮಾತುಕತೆ ನಡೆದಿದೆ. ಅಧಿಕಾರ ಹಂಚಿಕೆ ಸಂಬಂಧ ಮಾತುಕತೆ ಪೂರ್ಣಗೊಂಡರೆ ಶೀಘ್ರವೇ ಶಿವಸೇನೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಇಲ್ಲಿಯವರೆಗೆ ಕಾಂಗ್ರೆಸ್ ವಿರುದ್ಧವೇ ಹೇಳಿಕೆ ನೀಡುತಿತ್ತು. ಹೀಗಾಗಿ ಕಾಂಗ್ರೆಸ್ ಮೈತ್ರಿಗೆ ಒಪ್ಪಿಗೆ ನೀಡಿದ್ದು ಕೈ ನಾಯಕರೇ ವಿರೋಧಿಸಿದ್ದಾರೆ. ಕಾಂಗ್ರೆಸ್ ಬಂಡಾಯ ನಾಯಕ ಸಂಜಯ್ ನಿರುಪಮ್ ಟ್ವೀಟ್ ಮಾಡಿ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಹಾನಿಯಾಗುತ್ತದೆ. ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ. 2020ಕ್ಕೆ ಮತ್ತೆ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಿವಸೇನೆಯ ಜೊತೆ ಮೈತ್ರಿ ಮಾಡುತ್ತಾ ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಿವಸೇನೆ ಮೈತ್ರಿ ಮಾಡಿಕೊಂಡಿದ್ದರೆ ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಮಾಡಿಕೊಂಡಿತ್ತು. ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್‍ಸಿಪಿ 54, ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಫಲಿತಾಂಶ ಪ್ರಕಟಗೊಂಡ ದಿನವೇ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣನ್ನು ಇಟ್ಟಿರುವ ಶಿವಸೇನೆ ನಮ್ಮ ಬೇಡಿಕೆಯನ್ನು ಇರಿಸಿದರೆ ಮಾತ್ರ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿತ್ತು.
ಶಿವಸೇನೆ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಬಿಜೆಪಿ ಮಣಿದಿರಲಿಲ್ಲ. ಅಧ್ಯಕ್ಷ ಉದ್ಧವ್ ಠಾಕ್ರೆ ತಂದೆಯವರಾದ ಬಾಳಾ ಠಾಕ್ರೆಯವರಿಗೆ ಶಿವಸೇನೆ ನಾಯಕರು ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿದ್ದರು. ಈ ಕನಸು ನನಸು ಮಾಡಲು ಈ ಬೇಡಿಕೆಯನ್ನು ಇಟ್ಟಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಫಲಿತಾಂಶ ಬಂದ ದಿನವೇ ಸರ್ಕಾರ ರಚನೆಯ ಎಲ್ಲ ಬಾಗಿಲು ತೆರೆದಿದೆ ಎಂದು ಶಿವಸೇನೆಯ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದರು.