ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾಗುತ್ತಿದ್ದಂತೆಯೇ ಬಾಲಿವುಡ್ ಕೆಲ ನಟಿಯರು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಅಲ್ಲದೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ವಿವಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಸರಕಾರದ ಪತನ ಮತ್ತು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಾಲಿವುಡ್ ನಲ್ಲೂ ಕಿತ್ತಾಟ ಶುರುವಾಗಿದೆ.
Advertisement
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಭವ್ ಠಾಕ್ರೆ ರಾಜೀನಾಮೆ ನೀಡಿ, ಇದೀಗ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಕುರಿತಾಗಿಯೇ ಬಾಲಿವುಡ್ ನಲ್ಲಿ ಪರ ವಿರೋಧದ ಮಾತು ಕೇಳಿ ಬಂದಿವೆ. ಹೊಸ ಮುಖ್ಯಮಂತ್ರಿಯನ್ನು ಕಂಗನಾ ರಣಾವತ್ ಸ್ವಾಗತಿಸಿದ್ದರೆ, ನಿರ್ಗಮಿಸಿರುವ ಉದ್ಭವ್ ಠಾಕ್ರೆ ಬೆಂಬಲಕ್ಕೆ ದಿಯಾ ಮಿರ್ಜಾ ನಿಂತಿದ್ದಾರೆ. ಈ ಇಬ್ಬರ ನಡೆಗೂ ಪರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್
Advertisement
Advertisement
ಉದ್ಭವ್ ಠಾಕ್ರೆ ಅವರನ್ನು ದಿಯಾ ಮಿರ್ಜಾ ಮನಸಾರೆ ಹೊಗಳಿದ್ದಾರೆ. ಮುಂದಿನ ದಿನಗಳು ನಿಮಗೆ ಹೊಸ ಭರವಸೆ ಮತ್ತು ಚೈತನ್ಯವನ್ನು ನೀಡಲಿವೆ. ಮತ್ತೆ ನೀವು ಈ ರಾಜ್ಯವನ್ನು ಆಳುತ್ತೀರಿ ಎಂದು ಹೇಳಿದ್ದಾರೆ. ಈ ಮಾತಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಡಿದ್ದಾರೆ. ಯಾವ ರಾಜ್ಯ, ಯಾವ ರಾಜ? ಎಂದು ಪರೋಕ್ಷವಾಗಿಯೇ ಉದ್ಭವ್ ಠಾಕ್ರೆ ಅವರನ್ನು ಕಾಲೆಳೆದಿದ್ದಾರೆ.