ಮುಂಬೈ: ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ವೇಗವಾಗಿ ಚಲಿಸುತ್ತಿದ್ದ ಆಟೋವಿನಿಂದ 17 ವರ್ಷದ ಬಾಲಕಿ ಜಿಗಿದು ತಲೆಗೆ ಗಂಭೀರವಾಗಿ ಗಾಯಗೊಂಡಿರುವ ಮಹಾರಾಷ್ಟ್ರದ (Maharashtra) ಔರಂಗಾಬಾದ್‌ನಲ್ಲಿ (Aurangabad)ನಡೆದಿದೆ.
ಭಾನುವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಮುಂಬೈ ನಿವಾಸಿ ಸೈಯದ್ ಅಕ್ಬರ್ ಹಮೀದ್ ಎಂದು ಗುರುತಿಸಲಾಗಿದೆ. ನಾಲ್ಕೈದು ತಿಂಗಳ ಹಿಂದೆ ಔರಂಗಾಬಾದ್‍ಗೆ ತೆರಳಿ ಬಾಡಿಗೆ ಆಟೋರಿಕ್ಷಾ ಓಡಿಸುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕಿ ಆಟೋರಿಕ್ಷಾದಿಂದ ಜಿಗಿದ ಘಟನೆಯ ವೀಡಿಯೋ ಸೆರೆಯಾಗಿದೆ. ಅದೃಷ್ಟವಶಾತ್ ಬಾಲಕಿ ಜಿಗಿದ ವೇಳೆ ಕಾರೊಂದು ಪಕ್ಕದಲ್ಲಿಯೇ ಚಲಿಸಿದ್ದು, ಸಂಭವಿಸಬಹುದಾದ ಪ್ರಾಣಾಪಾಯದಿಂದ ಆಕೆ ಬಚಾವ್ ಆಗಿದ್ದಾಳೆ. ವೀಡಿಯೋದಲ್ಲಿ ಕೆಳಗೆ ಬಿದ್ದ ಬಾಲಕಿಗೆ ಪಾದಚಾರಿಗಳು ಸಹಾಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ
Aurangabad Video.
I cannot imagine how much courage she had to muster to jump from Syed Akbar Syed Hameed’s auto-rickshaw on a busy road.
Molested, and scared, she threw herself out without fearing for her life.
In Ch Shivaji Maharaj’s era, this man would have lost his limbs pic.twitter.com/crv5OMw1NY
— Pranav Jadhav (@pranaavj) November 16, 2022
ಬಾಲಕಿ ತನ್ನ ಟ್ಯೂಷನ್‍ಗೆ ತೆರಳಲು ಆಟೋ ಹತ್ತಿದ್ದಾಳೆ. ಈ ವೇಳೆ ಆರೋಪಿ ಆಟೋ ಚಾಲಕ ಸೈಯದ್ ಅಕ್ಬರ್ ಹಮೀದ್ ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಮಾತನಾಡಲು ಆರಂಭಿಸಿದ್ದಾನೆ. ನಂತರ ಕ್ರಮೇಣ ಬಾಲಕಿಗೆ ಬೆದರಿಕೆಯೊಡ್ಡಿ ಅಶ್ಲೀಲ ಟೀಕೆಗಳನ್ನು ಮಾಡಿದ್ದಾನೆ. ಬಳಿಕ ಆಟೋವನ್ನು ವೇಗವಾಗಿ ಚಲಾಯಿಸಲು ಆರಂಭಿಸಿದಾಗ ಬಾಲಕಿ ರಿಕ್ಷಾದಿಂದ ಏಕಾಏಕಿ ಜಿಗಿದಿದ್ದಾಳೆ. ಇದನ್ನೂ ಓದಿ: ಹನುಮಂತನ ಫೋಟೋ, ದೇವಾಲಯ ಆಕಾರದ ಕೇಕ್ ಕತ್ತರಿಸಿ ಕೈ ನಾಯಕನ ಬರ್ತ್‍ಡೇ ಸೆಲೆಬ್ರೇಷನ್
ಸದ್ಯ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ರಸ್ತೆಯಲ್ಲಿದ್ದ 40 ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಆಟೋ ಚಾಲಕನ ಸ್ಥಳವನ್ನು ಪತ್ತೆ ಹಚ್ಚಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.