Connect with us

Latest

ಚಿಕಿತ್ಸೆಗೆ ಬಂದಿದ್ದ ಯುವತಿಗೆ ಬಲವಂತವಾಗಿ ಸಗಣಿ ತಿನ್ನಿಸಿದ ಮಾಂತ್ರಿಕ

Published

on

ಲಾತೂರ್: ಚಿಕಿತ್ಸೆಗಾಗಿ ಬಂದಿದ್ದ 18 ವರ್ಷದ ಯುವತಿಗೆ ಮಾಂತ್ರಿಕನೊಬ್ಬ ಬಲವಂತವಾಗಿ ಸಗಣಿ ತಿನ್ನಿಸಿದ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.

ಬಿಎ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ಯುವತಿ ಕೆಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇದರಿಂದ ಆಕೆಗೆ ಮಾಟ ಮಂತ್ರ ಮಾಡಿಸಲಾಗಿದೆ ಎಂದು ನಂಬಿದ್ದ ಆಕೆಯ ಪೋಷಕರು ಚಿಕಿತ್ಸೆಗಾಗಿ ಯುವತಿಯನ್ನು ಜೂನ್ 4ರಂದು ಬೀದರ್‍ನ ಮಾಂತ್ರಿಕನೊಬ್ಬನ ಬಳಿ ಕರೆತಂದಿದ್ದರು.

ಮಾಂತ್ರಿಕ ಚಿಕಿತ್ಸೆಯ ನೆಪದಲ್ಲಿ ಯುವತಿಗೆ ಥಳಿಸಿ, ಬಲವಂತವಾಗಿ ಸಗಣಿಯನ್ನು ತಿನ್ನಿಸಿದ್ದಾನೆ. ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇದನ್ನು ವಿಡಿಯೋ ಮಾಡಿ ಸಾಮಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮಗನ ಸಮಸ್ಯೆ ಪರಿಹಾರಕ್ಕಾಗಿ ತಾಯಿಯನ್ನು 7 ಬಾರಿ ಸಂಭೋಗಿಸಿ 21 ಲಕ್ಷ ದೋಚಿದ್ದ ಕಾಮಿ ಜ್ಯೋತಿಷಿ ಅರೆಸ್ಟ್!

ಘಟನೆಯ ಸಂಬಂಧ ಯುವತಿಯ ತಂದೆ ಹಾಗೂ ಮಾಂತ್ರಿಕ ಸೇರಿದಂತೆ 6 ಜನರ ವಿರುದ್ಧ ಲಾತೂರು ಜಿಲ್ಲೆಯ ಚಾಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪ್ರಭಾಕರ್ ಕೆಸಳೆ (35), ಗಂಗಾಧರ್ ಶೇವಲೆ (65), ಪಂಡಿತ್ ಕೋರೆ (37) ಮತ್ತು ದಗಡು ಶೇವಲೆ (40) ಎಂಬವರನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಮಾಂತ್ರಿಕನ ಪತ್ತೆಗಾಗಿ ಕರ್ನಾಟಕದ ಬೀದರ್‍ಗೆ ಪೊಲೀಸರ ತಂಡವೊಂದನ್ನ ಕಳುಹಿಸಲಾಗಿದೆ ಎಂದು ಡಿಎಸ್‍ಪಿ ವಿಕಾಸ್ ನಾಯಕ್ ಹೇಳಿದ್ದಾರೆ.

ನರಬಲಿ ತಡೆ ಹಾಗೂ 2013ರ ಮಹಾರಾಷ್ಟ್ರ ಅಘೋರಿ ಆಚರಣೆ ಮತ್ತು ಮಾಟ ಮಂತ್ರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

 

Click to comment

Leave a Reply

Your email address will not be published. Required fields are marked *