ಮುಂಬೈ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ (Maharashtra Election Results) ಒಂದು ದಿನ ಬಾಕಿ ಇದ್ದು ರೆಸಾರ್ಟ್ ಪಾಲಿಟಿಕ್ಸ್ (Resort Politics) ಆರಂಭವಾಗುವ ಸಾಧ್ಯತೆಯಿದೆ.
ಚುನಾವಣೋತ್ತರ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದರೂ ಈ ಬಾರಿ ಎರಡು ಒಕ್ಕೂಟಗಳ ಮಧ್ಯೆ ನೇರಾನೇರ ಸ್ಪರ್ಧೆ ಇದೆ ಎನ್ನುವುದು ಮಹಾ ವಿಕಾಸ ಅಘಾಡಿ ಮೈತ್ರಿಗೆ ಗೊತ್ತಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರ ತಲೆದಂಡಕ್ಕೆ ಸಿದ್ಧತೆ!
ಪಕ್ಷಗಳ ಆಂತರಿಕ ಸಮೀಕ್ಷೆಯಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ (Congress) ಗೆಲುವು ಸಾಧಿಸಿದ ಶಾಸಕರನ್ನು ಕರ್ನಾಟಕಕ್ಕೆ (Karnataka) ಕಳುಹಿಸಲು ಮುಂದಾಗಿದೆ.
ಮೂರು ಚಾರ್ಟರ್ಡ್ ವಿಮಾನಗಳ ಸಿದ್ಧವಾಗಿಡುವಂತೆ ಸೂಚಿಸಲಾಗಿದೆ. ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಶಿವಸೇನಾ ನಾಯಕ ಉದ್ಧವ್ ಠಾಕ್ರೆ ನಿರ್ಧಾರಕ್ಕೆ ಕಾಂಗ್ರೆಸ್ ಈಗ ಕಾಯುತ್ತಿದೆ. ಒಂದು ವೇಳೆ ಇಬ್ಬರೂ ನಾಯಕರು ಅನುಮತಿ ನೀಡಿದರೆ ಮೂರು ಪಕ್ಷದ ಗೆದ್ದ ಶಾಸಕರು ಕರ್ನಾಟಕಕ್ಕೆ ಬರುವ ಸಾಧ್ಯತೆಯಿದೆ.
ಈ ಬಾರಿ ಅಧಿಕಾರಕ್ಕೆ ಏರಲೇಬೇಕೆಂದು ಅಘಾಡಿ ಮೈತ್ರಿ ಪಣ ತೊಟ್ಟಿದೆ. ಒಂದು ವೇಳೆ ಮಹಾಯುತಿಗೆ ಬಹುಮತ ಸಿಗದೇ ಇದ್ದರೆ ನಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಭೀತಿ ಅಘಾಡಿಗೆ ಇದೆ. ಈ ಕಾರಣಕ್ಕೆ ಈಗಲೇ ಶಾಸಕರನ್ನು ಹಿಡಿದಿಡಲು ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸುವ ಸಂಬಂಧ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.