ಮುಂಬೈ: ಮಹಾರಾಷ್ಟ್ರ (Maharashtra) ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ (Nana Patole) ಅವರು ಬಿಜೆಪಿಯನ್ನು ನಾಯಿಗೆ ಹೋಲಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಒಬಿಸಿ ಸಮುದಾಯವನ್ನು ದುರುಪಯೋಗಪಡಿಸಿಕೊಂಡ ಪಕ್ಷಕ್ಕೆ ‘ತನ್ನ ಸ್ಥಾನವನ್ನು ತೋರಿಸಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಕೋಲಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಟೋಲೆ, ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಜನರು ತಮ್ಮನ್ನು ತಾವು ದೇವರು ಮತ್ತು ವಿಶ್ವಗುರು ಎಂದು ಪರಿಗಣಿಸುತ್ತಾರೆ. ಮಹಾರಾಷ್ಟ್ರದಲ್ಲಿ ಫಡ್ನವೀಸ್ ತಮ್ಮನ್ನು ತಾವು ದೇವರೆಂದು ಪರಿಗಣಿಸುತ್ತಾರೆ ಪಟೋಲೆ ಹೇಳಿದರು. ಇದನ್ನೂ ಓದಿ: ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ
ಒಬಿಸಿ ಸಮುದಾಯಕ್ಕೆ ಬಿಜೆಪಿ ಅಗೌರವ ತೋರುತ್ತಿದೆ ಎಂದು ಆರೋಪಿಸಿದ ಪಟೋಲೆ, ನಿಮ್ಮನ್ನು ನಾಯಿ ಎಂದು ಕರೆಯುವ ಬಿಜೆಪಿಗೆ ಅಕೋಲಾ ಜಿಲ್ಲೆಯ ಒಬಿಸಿ ಜನರು ಮತ ಹಾಕುತ್ತಾರೆಯೇ? ಈಗ ಬಿಜೆಪಿಯನ್ನು ನಾಯಿ ಮಾಡುವ ಸಮಯ ಬಂದಿದೆ ಎಂದು ಹೇಳಿದರು. ಮಹಾರಾಷ್ಟ್ರದಿಂದ ಬಿಜೆಪಿಯನ್ನು ಕಿತ್ತೊಗೆಯುವ ಸಮಯ ಬಂದಿದೆ. ಈ ಪಕ್ಷ ಸುಳ್ಳಿನ ಕಂತೆಯೊಂದಿಗೆ ಅಧಿಕಾರಕ್ಕೆ ಬಂದಿದೆ ಮತ್ತು ಈಗ ತನ್ನ ಸ್ಥಾನವನ್ನು ತೋರಿಸುವ ಸಮಯ ಬಂದಿದೆ.
ಮಹಾ ವಿಕಾಸ್ ಅಘಾಡಿ ನಾಯಕರು ನಿರಾಶೆಗೊಂಡಿದ್ದಾರೆ, ಹತಾಶರಾಗಿದ್ದಾರೆ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಕಿರಿತ್ ಸೋಮಯ್ಯ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥರನ್ನು ನಾನಾ ಪಟೋಲೆ ತರಾಟೆಗೆ ತೆಗೆದುಕೊಂಡರು. ಅವರು ಈಗ ಬಿಜೆಪಿಯವರನ್ನು ನಾಯಿಗಳು ಎಂದು ಕರೆಯುತ್ತಿದ್ದಾರೆ, ಅವರು ಸೋಲನ್ನು ನೋಡಬಹುದು ಆದ್ದರಿಂದ ಹತಾಶೆಯಿಂದ ಈ ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಹಿಂದೂ ವಾಟ್ಸಪ್ ಗ್ರೂಪ್ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ – ಇಬ್ಬರು IAS ಅಧಿಕಾರಿಗಳು ಅಮಾನತು