ಮುಂಬೈ: ಒಬ್ಬ ವ್ಯಕ್ತಿ ಅಥವಾ ಶಾಸಕ ನನ್ನ ವಿರುದ್ಧ ಇದ್ದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಾಗಿದ್ದೇನೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆಗಳು ಬರುತ್ತವೆ, ಹೋಗುತ್ತವೆ. ಆದರೆ ಜನರ ಪ್ರೀತಿಯೇ ನಿಜವಾದ ಆಸ್ತಿ. ಕಳೆದ 2 ವರ್ಷಗಳಲ್ಲಿ ಜನರಿಂದ ಅಪಾರ ಪ್ರೀತಿಯನ್ನು ಪಡೆಯುವ ಭಾಗ್ಯ ನನಗಿದೆ. ಇದು ಸಂಖ್ಯೆಗಳ ಬಗ್ಗೆ ಅಲ್ಲ. ಒಬ್ಬ ಶಾಸಕನಾದರೂ ನನ್ನ ವಿರುದ್ಧ ಇದ್ದರೆ ಅದು ನನಗೆ ನಾಚಿಕೆಗೇಡಿನ ಸಂಗತಿ. ಇದರಿಂದಾಗಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದರು.
Advertisement
Advertisement
ಶಿವಸೇನಾ ಶಾಸಕ ಮತ್ತು ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ತಮಗೆ 40 ಶಾಸಕರ ಬೆಂಬಲ ಇದೆ ಎಂದು ತಿಳಿಸಿರುವುದು ಮಹಾರಾಷ್ಟ್ರದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿ ಸರ್ಕಾರಕ್ಕೆ ಇದೀಗ ಸಂಕಷ್ಟ ಬಂದಿದ್ದು, ಈ ಹಿನ್ನೆಲೆ ನಿನ್ನೆಯಿಂದ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಂಜಯ್ ರಾವತ್ ಟ್ವೀಟ್ ಮಾಡಿ, ವಿಧಾನಸಭೆ ವಿಸರ್ಜನೆಯತ್ತ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಪಯಣ ಎಂದು ಬರೆದಿದ್ದರು. ಈ ಮೂಲಕ ಶಾಸಕಾಂಗ ಸಭೆಯನ್ನು ವಿಸರ್ಜಿಸುವ ಬಗ್ಗೆ ಸುಳಿವು ಕೊಟ್ಟಿದ್ದರು. ಇದನ್ನೂ ಓದಿ: ಈದ್ಗಾ ಮೈದಾನ ಮಾಲೀಕತ್ವ ನಮ್ಮದಲ್ಲ – ಉಲ್ಟಾ ಹೊಡೆದ BBMP