ಮುಂಬೈ: ಚುನಾವಣೆ ವೇಳೆ ಹಲವು ನಾಯಕರು ಚಂದ್ರ, ನಕ್ಷತ್ರ ಭರವಸೆ ನೀಡಿ ನಂತರ ಮರೆತು ಬಿಡುತ್ತಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜನ ಸಾಮಾನ್ಯರಿಗೆ ಚಂದ್ರ ನಕ್ಷತ್ರಗಳ ಭರವಸೆ ನೀಡುತ್ತಾರೆ. ನಂತರದಲ್ಲಿ ಜನರು ಈ ಚಂದ್ರ ನಕ್ಷತ್ರಗಳ ಭರವಸೆಗಳನ್ನು ಕೇಳಿದರೆ ಈ ನಾಯಕರು ಆ ಭರವಸೆಗಳನ್ನು ನಾವು ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆವು ಎನ್ನುತ್ತಾರೆ. ಆದರೆ ಶಿವಸೇನೆ ಹಾಗಲ್ಲ, ಈಡೇರಿಸಲಾಗದ ಭರವಸೆಗಳನ್ನು ಎಂದಿಗೂ ನೀಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬುರ್ಖಾ ಧರಿಸಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿದ ಸಾಯಿ ಪಲ್ಲವಿ
Advertisement
Advertisement
ಶಿವಸೇನೆಯು ಎಲ್ಲಾ ಕಾಲದಲ್ಲೂ ಹೀಗೆಯೇ ಇತ್ತು. ಕಾಂಗ್ರೆಸ್ ಎನ್‍ಸಿಪಿ ಜೊತೆ ನಮ್ಮ ಪಕ್ಷ ಸಾಗುತ್ತಿದ್ದು, ಯಾರೆಲ್ಲ ಹೊರಗುಳಿದಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ನುಡಿದರು. ಇದನ್ನೂ ಓದಿ: ಜನರನ್ನು ಸಜ್ಜುಗೊಳಿಸಬೇಕಾದ ಸಚಿವರು, ಶಾಸಕರಿಗೆ ಸೋಂಕು ತಗುಲಿರುವುದು ಆತಂಕಕಾರಿ: ಅಜಿತ್ ಪವಾರ್
Advertisement
ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಹೆಚ್ಚಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಪರಿಸ್ಥಿತಿಯ ಬಗ್ಗೆ ಸೇನಾ ಮುಖ್ಯಸ್ಥರು, ನಾವು ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ. ನಿಮ್ಮ ಬೆಂಬಲವನ್ನು ನಮ್ಮೊಂದಿಗೆ ಇಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ, ನಾನು ಕೊರೊನಾವೈರಸ್ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.