ಮುಂಬೈ: ಕಳೆದ ವಾರ ಸಿಯಾಚಿನ್‌ನಲ್ಲಿ (Siachen) ಕರ್ತವ್ಯದ ವೇಳೆ ಹುತಾತ್ಮನಾದ ಅಗ್ನಿವೀರ್ (Agniveer) ಅಕ್ಷಯ್ ಲಕ್ಷ್ಮಣ್ ಗವಾಟೆ (Akshay Laxman Gawate) ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು 10 ಲಕ್ಷ ರೂ. ನೆರವು ಘೋಷಿಸಿದ್ದಾರೆ.
ಮಹಾರಾಷ್ಟ್ರದ (Maharashtra) ಬುಲ್ಧಾನಾ ಜಿಲ್ಲೆಯ ಪಿಂಪಲ್‌ಗಾಂವ್ ಸರಾಯ್ ಮೂಲದ ಗವಾಟೆ ಕಳೆದ ವಾರ ಸಿಯಾಚಿನ್‌ನಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದರು. ಅಗ್ನಿವೀರನ ಅಗಲಿಕೆಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಪಡೆಯ ಎಲ್ಲಾ ಶ್ರೇಣಿಗಳು ಸಂತಾಪ ಸೂಚಿಸಿದ್ದಾರೆ. ಇದೀಗ ಗವಾಟೆ ನಿಧನದಿಂದ ದುಃಖತಪ್ತ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯ ಮಂತ್ರಿ ಶಿಂಧೆ ಸಂತಾಪ ಸೂಚಿಸಿದ್ದು, 10 ಲಕ್ಷ ರೂ. ಪರಿಹಾರ ಘೋಷಿಸಿರುವುದಾಗಿ ಸಚಿವಾಲಯ ತಿಳಿಸಿದೆ.
Advertisement
Advertisement
ಅಗ್ನಿವೀರನ ಅಗಲಿಕೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಾದಾಡಿಕೊಂಡಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗವಾಟೆ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅಗ್ನಿವೀರ್ ದೇಶದ ವೀರರನ್ನು ಅವಮಾನಿಸುವ ಯೋಜನೆ. ಅಗ್ನಿವೀರ್ ಹುತಾತ್ಮರ ಕುಟುಂಬಗಳಿಗೆ ಯಾವುದೇ ಗ್ರಾಚ್ಯೂಟಿ, ಮಿಲಿಟರಿ ಸೌಲಭ್ಯಗಳು ಅಥವಾ ಪಿಂಚಣಿಗಳನ್ನು ವಿಸ್ತರಿಸಲಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಗ್ನಿವೀರರಿಗೆ ಮಿಲಿಟರಿ ಸೌಲಭ್ಯಗಳಿಲ್ಲ- ರಾಹುಲ್ ಆರೋಪಕ್ಕೆ ಸೇನೆಯಿಂದ ಪಟ್ಟಿ ರಿಲೀಸ್
Advertisement
Advertisement
ಈ ಆರೋಪಕ್ಕೆ ಭಾರತೀಯ ಸೇನೆ ಪ್ರತಿಕ್ರಿಯೆ ನೀಡಿತ್ತು. ಅಗ್ನಿವೀರರಿಗೆ ಒಟ್ಟು 1.13 ಕೋಟಿ ರೂ. ಪರಿಹಾರ ಸಿಗುತ್ತದೆ ಎಂದು ತಿಳಿಸುವ ಮೂಲಕ ರಾಹುಲ್ ಗಾಂಧಿ ಮಾಡಿರುವ ಆರೋಪ ಸುಳ್ಳು ಎಂದು ಸೇನೆ ಪರೋಕ್ಷವಾಗಿ ಹೇಳಿತ್ತು. ಇದನ್ನೂ ಓದಿ: ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ
Web Stories