ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಏಕನಾಥ್ ಶಿಂಧೆ ಅವರು ತಮ್ಮ ಊರಾದ ಥಾಣೆಗೆ ಆಗಮಿಸುತ್ತಿದ್ದಂತೆ, ಅವರ ಪತ್ನಿ ಲತಾ ಏಕನಾಥ್ ಶಿಂಧೆ ಡ್ರಮ್ ಬಾರಿಸುವ ಮೂಲಕ ಸ್ವಾಗತ ಕೊರಿದರು.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದ ಬಂಡಾಯ ಶಾಸಕರ ನೇತೃತ್ವದ ನಾಯಕ ಏಕನಾಥ್ ಶಿಂಧೆ ಅವರು ಜೂ. 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 3 ವಾರಗಳ ಹಿಂದೆ ಶಿವಸೇನೆ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಶಿಂಧೆ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಮ್ಮ ಊರಿಗೆ ತೆರಳಿದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಆರೋಪಿ, ರಿಯಾಲಿಟಿ ಶೋ ಡಾನ್ಸರ್ ಕಿಶೋರ್‌ಗೆ ಪೊಲೀಸ್ ಫುಲ್ ಕ್ಲಾಸ್
ಶಿಂಧೆ ಥಾಣೆಗೆ ಆಗಮಿಸುತ್ತಿದ್ದಂತೆ ಆನಂದನಗರದಲ್ಲಿ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಬೆಂಬಲಿಗರು ಜಮಾಯಿಸಿ ಅವರ ಕಾರಿನ ಮೇಲೆ ಪುಷ್ಪವೃಷ್ಟಿ ಮಾಡಿದರು. ಅವರನ್ನು ಸ್ವಾಗತಿಸಲು ಹಲವಾರು ಜನರು ಭಾರೀ ಮಳೆಯಲ್ಲಿ ಹಲವಾರು ಗಂಟೆಗಳ ಕಾಲ ಕಾದಿದ್ದರು. ಇದನ್ನೂ ಓದಿ: ಅಭಿವೃದ್ಧಿ ಮತ್ತು ಹಿಂದುತ್ವಕ್ಕಾಗಿ ಬಿಜೆಪಿ ನಮ್ಮನ್ನು ಬೆಂಬಲಿಸಿದೆ – ಏಕನಾಥ್ ಶಿಂಧೆ