ಮುಂಬೈ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾನ್ಸನ್ ಅಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್‌ನ ಬೇಬಿ ಪೌಡರ್(Johnson’s Baby Powder) ಉತ್ಪಾದನಾ ಪರವಾನಗಿಯನ್ನು(License) ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ(FDA) ರದ್ದುಗೊಳಿಸಿದೆ.
ಜಾನ್ಸನ್ ಕಂಪನಿಯ ಉತ್ಪನ್ನವಾದ ಬೇಬಿ ಪೌಡರ್ ಮಕ್ಕಳ ಚರ್ಮದ ಮೇಲೆ ಪರಿಣಾಮ ಬೀರಬಹುದು. ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ ಇದರ ಪುಡಿಯ ಮಾದರಿ ಮಕ್ಕಳ ಚರ್ಮದ ಪಿಹೆಚ್ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ತಿರುಮಲಕ್ಕೆ ಭಾವಿ ಸೊಸೆಯೊಂದಿಗೆ ಮುಖೇಶ್ ಅಂಬಾನಿ ಭೇಟಿ – ದೇವಾಲಯಕ್ಕೆ 1.5 ಕೋಟಿ ದೇಣಿಗೆ
ಉತ್ಪನ್ನದ ಗುಣಮಟ್ಟದ ತಪಾಸಣೆಯ ಉದ್ದೇಶಕ್ಕಾಗಿ ಪುಣೆ ಹಾಗೂ ನಾಸಿಕ್‌ನಿಂದ ಎಫ್‌ಡಿಎ ಜಾನ್ಸನ್ ಬೇಬಿ ಪೌಡರ್‌ನ ಮಾದರಿಗಳನ್ನು ಪಡೆದುಕೊಂಡಿದೆ. ಗುಣಮಟ್ಟದ ಪರೀಕ್ಷೆ ವೇಳೆ ಅದು ಐಎಸ್ 5339:2004 ರಷ್ಟು ನಿರ್ದಿಷ್ಟತೆಯನ್ನು ಪಡೆದುಕೊಂಡಿರದ ಕಾರಣ ಅದು ಮಕ್ಕಳ ತ್ವಚೆಗೆ ಯೋಗ್ಯವಾಗಿಲ್ಲ ಎಂದು ಘೋಷಿಸಲಾಗಿದೆ. ಇದನ್ನೂ ಓದಿ: ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ
ಇದೀಗ ಎಫ್‌ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಹಾಗೂ ನಿಯಮಗಳ ಅಡಿಯಲ್ಲಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿದೆ. ಮಾತ್ರವಲ್ಲದೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳ ಸ್ಟಾಕ್ ಅನ್ನು ಹಿಂಪಡೆಯುವಂತೆ ಸೂಚನೆ ನೀಡಿದೆ.