ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಂಬತ್ತು ಬಿಜೆಪಿ ನಾಯಕರು ಮತ್ತು ಒಂಬತ್ತು ಶಿವಸೇನೆ ನಾಯಕರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Maharashtra Cabinet expansion | 18 ministers to be sworn in today at Raj Bhavan in Mumbai pic.twitter.com/1vUX6e2yoy
— ANI (@ANI) August 9, 2022
Advertisement
ಬಿಜೆಪಿ ನಾಯಕರು
ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗನ್‌ತಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಡೆ, ರಾಧಾಕೃಷ್ಣ ವಿಖೆ ಪಾಟೀಲ್, ರವೀಂದ್ರ ಚೌಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗವಿತ್, ಆತುಲ್ ಸವೆ. ಇದನ್ನೂ ಓದಿ: ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ
Advertisement
Maharashtra Cabinet expansion | Governor Bhagat Singh Koshyari administers the oath of office to 18 MLAs as ministers pic.twitter.com/2eDIBVxWj3
— ANI (@ANI) August 9, 2022
Advertisement
ಶಿವಸೇನಾ ನಾಯಕರು
ದಾದಾ ಭುಸೆ, ಶಂಭುರಾಜ್ ದೇಸಾಯಿ, ಸಂದೀಪನ್ ಭುಮ್ರೆ, ಉದಯ್ ಸಮಂತ್, ತಾನಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸಾರ್ಕರ್, ಗುಲಬ್‌ರಾವ್ ಪಾಟೀಲ್, ಸಂಜಯ್ ರಾಥೋಡ್. ಮುಂಬೈ ರಾಜಭವನದಲ್ಲಿ ಒಟ್ಟು 18 ಶಾಸಕರು ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Advertisement
ಶಿವಸೇನಾದ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದ್ದ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ವಿರುದ್ಧ ಏಕನಾಥ ಶಿಂಧೆ ಬಂಡಾಯವೆದ್ದಿದ್ದರು. ನಂತರ ಶಿವಸೇನಾದಲ್ಲಿ ಉದ್ಧವ್ ಮತ್ತು ಶಿಂಧೆ ಬಣ ರೂಪುಗೊಂಡಿತು. ಶಿಂಧೆ ಬಣದಲ್ಲಿ ಶಿವಸೇನಾದ ಹೆಚ್ಚಿನ ಶಾಸಕರು ಸೇರಿದ್ದರು. ಈ ಹಿನ್ನೆಲೆಯಲ್ಲಿ ಶಿಂಧೆ ಬಣ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿತು. ಇದನ್ನೂ ಓದಿ: ಸಿಬಲ್ ವಿರುದ್ದ ನ್ಯಾಯಾಂಗ ನಿಂದನೆ ಕೇಸ್: ಅಟಾರ್ನಿ ಜನರಲ್‌ಗೆ ಮನವಿ
ಸರ್ಕಾರ ರಚನೆಯಾಗಿ 40 ದಿನಗಳ ನಂತರ ಇಂದು ಸಂಪುಟ ವಿಸ್ತರಣೆ ಮಾಡಲಾಗಿದೆ. ಬಿಜೆಪಿ ಹಾಗೂ ಶಿಂಧೆ ಬಣದ ತಲಾ 9 ನಾಯಕರಿಗೆ ಇಂದು ಪ್ರಮಾಣ ವಚನ ಬೋಧಿಸಲಾಗುವುದು. ಆ ಮೂಲಕ ಮೈತ್ರಿ ಸರ್ಕಾರ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೊಂಡು ಆಡಳಿತ ನಡೆಸಲು ಮುಂದಾಗಿದೆ.