ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆ ಒಂದು ಸಾವಿರ ಸೋಂಕಿತರ ಗಡಿ ದಾಟಿದೆ.
ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 150 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,018ಕ್ಕೆ ಕಂಡಿದೆ. ದೇಶದಲ್ಲಿ ಈವರೆಗೂ ಯಾವುದೇ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿರಲಿಲ್ಲ. ಆದರೆ ಮಹಾರಾಷ್ಟ್ರ ಈ ಕೆಟ್ಟ ದಾಖಲೆ ಬರೆದಿದೆ.
Advertisement
150 more #COVID19 positive cases reported in Maharashtra today, taking the total number of coronavirus cases in the state to 1,018: Maharashtra Health Department pic.twitter.com/hMObRs4PIF
— ANI (@ANI) April 7, 2020
Advertisement
ಮಹಾರಾಷ್ಟ್ರದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಮಂಗಳವಾರದ ಪುಣೆಯಲ್ಲಿ 8 ಮಂದಿ ಸೋಂಕಿತರು, ಅಹ್ಮದ್‍ನಗರ, ನಾಗಪುರ್, ಔರಂಗಬಾದ್‍ನಲ್ಲಿ ತಲಾ 3 ಜನ ಸೋಂಕಿತರು, ಥಾಣೆ, ಬುಲ್ಡಾನಾನಲ್ಲಿ ತಲಾ ಇಬ್ಬರು ಸೋಂಕಿತು, ಸತಾರಾ, ರತ್ನಾಗಿರಿ ಮತ್ತು ಸಾಂಗ್ಲಿಯಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ.
Advertisement
ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ 699 ಜನ ಸೋಂಕಿತರನ್ನು ಹೊಂದಿರುವ ತಮಿಳುನಾಡು ಇದೆ. ಮಂಗಳವಾರ ತಮಿಳುನಾಡಿನಲ್ಲಿ 69 ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ 63 ಮಂದಿ ದೆಹಲಿ ತಬ್ಲಿಘಿ ಜಮಾತ್ ಸಭೆಗೆ ನಂಟು ಹೊಂದಿದವರೇ ಆಗಿದ್ದಾರೆ. ತಮಿಳುನಾಡಿನಲ್ಲಿ ಈವರೆಗೂ ಪತ್ತೆಯಾದ 699 ಜನ ಸೋಂಕಿತರಲ್ಲಿ 636 ಮಂದಿ ಜಮಾತ್ ನಂಟು ಹೊಂದಿದ್ದಾರೆ.
Advertisement
Today 69 people tested positive of which 63 persons are those who attended Tableeghi Jamaat event in Delhi.
Total number of positive cases in the state rises to 690 of which 636 are Tableeghi Jamaat attendees: Beela Rajesh,Tamil Nadu Health Secretary #COVID19 (file pic) pic.twitter.com/WfvVS4i1CQ
— ANI (@ANI) April 7, 2020
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾತ್ರಿ 8 ಗಂಟೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 508 ಜನರಿಗೆ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,789ಕ್ಕೆ ಏರಿಕೆ ಕಂಡಿದೆ. 24 ಗಂಟೆಯಲ್ಲಿ 13 ಮಂದಿ ಸಾವನ್ನಪ್ಪವ ಮೂಲಕ ಸಾವಿನ ಸಂಖ್ಯೆ 140ಕ್ಕೆ ಏರಿದೆ.
ಕೊರೊನಾ ಬಗ್ಗೆ ಆನ್‍ಲೈನ್‍ನಲ್ಲಿ ತರಬೇತಿ ಪಡೆಯುವಂತೆ ಸೈನಿಕರು, ಪೊಲೀಸರು, ರೆಡ್‍ಕ್ರಾಸ್ ಸಂಸ್ಥೆ, ಎನ್‍ಸಿಸಿ, ಎನ್‍ಎಸ್‍ಎಸ್‍ನವರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೊರೊನಾ ಕಂಟ್ರೋಲ್ ಮತ್ತು ತಬ್ಲಿಘಿಗಳ ಪತ್ತೆಗೆ ದೆಹಲಿ 5 ಸೂತ್ರ ರೂಪಿಸಿದೆ.
508 more #COVID19 positive cases & 13 deaths reported in the last 24 hours. India's positive cases rise to 4,789 (including 4312 active cases, 353 cured/discharged/migrated people and 124 deaths): Ministry of Health and Family Welfare pic.twitter.com/ETnrdVwqgr
— ANI (@ANI) April 7, 2020