– ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸೋದು ಕಾನೂನು ಉಲ್ಲಂಘನೆಯೇ?
ಉಡುಪಿ: ಸೋಷಿಯಲ್ ಮೀಡಿಯಾದಲ್ಲಿ ಈಗ ರೀಲ್ಸ್ ಹವಾ ಜಾಸ್ತಿಯಾಗಿದೆ. ಯುವಕ-ಯುವತಿಯರಂತು (Youngster) ತಮ್ಮ ಫಾಲೋವರ್‌ಗಳನ್ನ ಹೆಚ್ಚಿಸಿಕೊಳ್ಳಲು, ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಪಡೆಯಲು ಹಲವು ರೀತಿಯ ಸ್ಟಂಟ್‌ಗಳನ್ನ ಮಾಡ್ತಾರೆ. ಅದರಲ್ಲೂ ಕೆಲ ಯುವತಿಯರು ಮೈಬಿಸಿ ಏರಿಸುವಂತಹ ಬಟ್ಟೆ ತೊಟ್ಟು ಫೋಟೋ ಶೂಟ್ ಮಾಡಿಸುವುದನ್ನೇ ಟ್ರೆಂಡ್ ಆಗಿ ಮಾಡಿಕೊಂಡಿದ್ದಾರೆ. ಅದೇ ರೀತಿ ಉಡುಪಿ ಬೀಚ್‌ನಲ್ಲಿ ಬಿಕಿನಿ ತೊಟ್ಟು ಫೋಟೋಶೂಟ್ (Bikini Photoshoot) ಮಾಡಿಸುತ್ತಿದ್ದ ಯುವತಿಯೊಬ್ಬಳು ಅದನ್ನು ತಡೆಯಲು ಬಂದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
View this post on Instagram
Advertisement
ಹೌದು. ಉಡುಪಿಯ ಪಡುಕೆರೆ ಬೀಚ್‌ನಲ್ಲಿ (Padukere Beach) ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸುತ್ತಿದ್ದ ವೇಳೆ ಮಲ್ಪೆ ಪೊಲೀಸರು ಯುವತಿಯನ್ನ ತಡೆಯಲು ಮುಂದಾಗಿದ್ದಾರೆ. ಇದರಿಂದ ಅಸಮಾಧಾನಗೊಂಡ ಯುವತಿ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಫೋಟೋ-ವೀಡಿಯೊವೊಂದನ್ನು ಅಪ್ಲೋಡ್ ಮಾಡಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಂದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರದವರೆಗೂ ಮೆಟ್ರೋ ಸೇವೆ ಸ್ಥಗಿತ
Advertisement
Police stopped me at Udupi beach in Karnataka for wearing a bikni. When I asked why, the officer pointed at some goons telling me they will beat us if I don’t change clothes. (Full video of this incident on my instagram) pic.twitter.com/3jrxUycbcv
— Khyati Shree (@KhyatiShree_) August 29, 2024
Advertisement
ಏನಿದು ಘಟನೆ?
ಮಹಾರಾಷ್ಟ್ರ ಮೂಲದ ಮಾಡೆಲ್ ಖ್ಯಾತಿಶ್ರೀ (Khyati Shree) ಪಡುಕೆರೆ ಬೀಚ್‌ನಲ್ಲಿ ಎದೆ ಸೀಳು ಕಾಣಿಸುವಂತೆ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸುತ್ತಿದ್ದರು. ಈ ವೇಳೆ ಪಡುಕೆರೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಮಲ್ಪೆ ಪೊಲೀಸರು ಬಟ್ಟೆ ಬದಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಯುವತಿ ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದು, ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವೀಡಿಯೋ ಸಮೇತ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶನನ್ನು ಕೂರಿಸ್ತೀರಾ – ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?
Advertisement
ಯುವತಿ ಇನ್‌ಸ್ಟಾ ಹೇಳಿರೋದೇನು?
ಉಡುಪಿ ಬೀಚ್‌ನಲ್ಲಿ (Udupi Beach) ನಮಗೆ ಕಹಿ ಅನುಭವ ಆಯಿತು. ನಾವು ಫೋಟೋ ಶೂಟ್ ಮಾಡಿಸುತ್ತಿದ್ದೆವು. ಆದ್ರೆ ಅಲ್ಲಿನ ಪೊಲೀಸರು ಬಟ್ಟೆ ಬದಲಿಸುವಂತೆ ಸೂಚಿಸಿದರು. ಏಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ದುರ್ವರ್ತನೆ ತೋರಿದರೆ ಸ್ಥಳೀಯರು ಹಲ್ಲೆ ನಡೆಸುತ್ತಾರೆ ಎಂದು ತಾಕೀತು ಮಾಡಿದರು. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರು? ಬೀಚ್ ಸಾರ್ವಜನಿಕ ಪ್ರದೇಶ, ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಪೊಲೀಸರನ್ನು ಯುವತಿ ಪ್ರಶ್ನೆ ಮಾಡಿದ್ದಾಳೆ. ಇದನ್ನೂ ಓದಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು
ಖ್ಯಾತಿಶ್ರೀ ಎಂಬ ಯುವತಿ ಫೋಟೋ ವೀಡಿಯೋ ಇನ್‌ಸ್ಟಾ ಪೇಜ್‌ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ, ಸುಮಾರು 50 ಸಾವಿರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.