ಮುಂಬೈ: ನಿಷೇಧಿತ ಪಿಎಫ್‍ಐ (PFI) ಸಂಘಟನೆ ಕುರಿತಂತೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು (Ram Mandir) ಧ್ವಂಸ ಮಾಡಲು ಪಿಎಫ್‍ಐ ಷಡ್ಯಂತ್ರ ರೂಪಿಸಿತ್ತು ಎಂಬುದನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಬಹಿರಂಗಪಡಿಸಿದೆ.
ರಾಮಮಂದಿರ ಧ್ವಂಸ ಮಾಡಿ ಅದರ ಜಾಗದಲ್ಲಿ ಬಾಬ್ರಿ ಮಸೀದಿ (Babri Masjid) ನಿರ್ಮಿಸಲು ಪಿಎಫ್‍ಐ ಪ್ಲಾನ್ ಮಾಡಿತ್ತು. ಅಷ್ಟೇ ಅಲ್ಲದೇ 2047ರ ವೇಳೆಗೆ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಅವರು ಯೋಜಿಸಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ ಎಟಿಎಸ್ ಇತ್ತೀಚೆಗೆ ಮಹಾರಾಷ್ಟ್ರದ ಮಾಲೆಗಾಂವ್, ಪುಣೆ ಮತ್ತು ಇತರ ಪ್ರದೇಶಗಳಿಂದ ಐವರು ಪಿಎಫ್‍ಐ ಜಿಹಾದಿಗಳನ್ನು ಬಂಧಿಸಿದೆ. ಇದನ್ನೂ ಓದಿ: ಚೇತನ್ ತಮ್ಮನ್ನು ತಾವು ಬೆಳಕಿಗೆ ತರಲು ಕಾಂತಾರ ಸಿನಿಮಾವನ್ನು ಬಳಸಿದ್ದಾರೆ: ಸ್ವರಾಜ್ ಶೆಟ್ಟಿ
ಈ ಮಧ್ಯೆ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್‍ಡಿಪಿಐ ಮುಖಂಡರು, ಬಿಜೆಪಿ ಸರ್ಕಾರ ಪೊಲೀಸರನ್ನು ಬಳಸಿಕೊಂಡು ನಮ್ಮ ಪಕ್ಷವನ್ನು ಹತ್ತಿಕ್ಕಲು ಪ್ರಯತ್ನಿಸ್ತಿದೆ ಎಂದು ಆರೋಪಿಸಿದ್ದರು. ಎಸ್‍ಡಿಪಿಐ ಪಕ್ಷವನ್ನು ನಿಷೇಧಿಸಲು ಹುನ್ನಾರ ನಡೆದಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಕಿಡಿಕಾರಿದರು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ವಿರುದ್ಧವೂ ಹರಿಹಾಯ್ದರು. ಇದನ್ನೂ ಓದಿ: ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ