ಮುಂಬೈ: ಕಾಂಗ್ರೆಸ್ ರಾಜ್ಯ ಸರ್ಕಾರಗಳ ಗ್ಯಾರಂಟಿಗಳನ್ನೇ ಗುರಿಯಾಗಿಸಿಕೊಂಡು ಜಾಹೀರಾತು ನೀಡಿದ್ದ ಬಿಜೆಪಿ ಸೋಮವಾರ ‘ಏಕ್ ಹೈ ತೋ ಸೇಫ್ ಹೈ’ (ಒಟ್ಟಾಗಿದ್ದರೆ ನಾವು ಸುರಕ್ಷಿತ) ಎಂಬ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಘೋಷಣೆಯನ್ನು ಜಾಹೀರಾತಾಗಿ ಪ್ರಕಟಿಸಿದೆ.
ಚುನಾವಣಾ ಪ್ರಚಾರಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ನಡುವೆ ಬಿರುಕು ಮೂಡಿಸಲು ವಿಭಜಕ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು. ಏಕ್ ಹೈ ತೋ ಸೇಫ್ ಹೈ’ (ಒಟ್ಟಾಗಿದ್ದರೆ ನಾವು ಸುರಕ್ಷಿತ) ಎಂದು ಘೋಷಣೆ ನೀಡಿದ್ದರು. ಇದನ್ನೂ ಓದಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ್ ಖನ್ನಾ ಪ್ರಮಾಣ ವಚನ ಸ್ವೀಕಾರ
Advertisement
Advertisement
ಇದೇ ಹೇಳಿಕೆಯನ್ನು ಇಂದಿನ ದಿನ ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತಾಗಿ ಪ್ರಕಟಿಸಿದೆ. ಕೇಸರಿ ಬಣ್ಣದಲ್ಲಿ ‘ಏಕ್ ಹೈ ತೋ ಸೇಫ್ ಹೈ’ (ಒಟ್ಟಾಗಿದ್ದರೆ ನಾವು ಸುರಕ್ಷಿತ) ಪೂರ್ಣ ಪುಟದ ಜಾಹೀರಾತು ನೀಡಿದೆ. ಏಕ್ ಎನ್ನುವ ಪದವನ್ನು ಹೈಲೈಟ್ ಮಾಡಿದ್ದು ಇದರಲ್ಲಿ ಭಾರತದ ಎಲ್ಲ ಧರ್ಮಗಳ ಪೇಟಗಳನ್ನು ಬಳಸಿದೆ. ಬಿಜೆಪಿ ಬಿಡುಗಡೆ ಮಾಡಿರುವ ಪತ್ರಿಕೆಯ ಜಾಹೀರಾತಿನಲ್ಲಿ ಮಹಾಯುತಿ ಮೈತ್ರಿಕೂಟದ ಪಾಲುದಾರರಾದ ಶಿವಸೇನೆ ಮತ್ತು ಎನ್‌ಸಿಪಿಯ ಲೋಗೋಗಳಿವೆ.
Advertisement
Advertisement
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪ್ರಧಾನಿ ಮೋದಿ ಈ ಹೇಳಿಕೆಯನ್ನು ಟೀಕಿಸಿದ್ದವು. ಬಿಜೆಪಿಯು ಸಮುದಾಯಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟುತ್ತಿದೆ. ‘ನಮ್ಮ ವಿರುದ್ಧ ಅವರಿಗೆ’ ಎಂಬ ಭಾವನೆಯನ್ನು ಬೆಳೆಸುತ್ತಿದೆ ಎಂದು ಆರೋಪಿಸಿದ್ದವು. ಬಿಜೆಪಿಯು ಭಯ ಮತ್ತು ಅಭದ್ರತೆಯ ಮೇಲೆ ಆಟವಾಡುತ್ತಿದೆ. ಇದು ಸಮಾಜದ ಧ್ರುವೀಕರಣವನ್ನು ಇನ್ನಷ್ಟು ಆಳಗೊಳಿಸುತ್ತದೆ ಎಂದು ಅವರು ಆರೋಪಿಸಿದ್ದರು. ವಿಪಕ್ಷಗಳ ಟೀಕೆ ಹಿನ್ನೆಲೆ ಇದೇ ಹೇಳಿಕೆಯನ್ನು ಬಿಜೆಪಿ ಜಾಹೀರಾತಿನ ಮೂಲಕ ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: Maharashtra Polls | 28 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್