ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ವಾಟ್ಸಪ್ ಗ್ರೂಪ್‍ನಲ್ಲಿ ಪ್ರಚಾರ ಮಾಡಿದ್ದಕ್ಕೆ 12 ಗ್ರೂಪ್‍ಗಳ ಅಡ್ಮಿನ್‍ಗಳಿಗೆ ನೋಟಿಸ್ ಜಾರಿಯಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ 12 ಖಾಸಗಿ ವಾಟ್ಸಾಪ್ ಗ್ರೂಪ್‍ಗಳ ಅಡ್ಮಿನ್‍ಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ನೋಟಿಸ್ ಕಳುಹಿಸಿದೆ. ಮುಖ್ಯ ವಿಷಯವೆಂದರೆ ನೋಟಿಸ್ ಪಡೆದವರು ಯಾರೂ ಗ್ರೂಪ್‍ನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂದೇಶ ಕಳುಹಿಸಲಿಲ್ಲ. ಆದರೆ ಗುಂಪುನ ಸದಸ್ಯರೊಬ್ಬರು ಕಳುಹಿಸಿದ ಸಂದೇಶದಿಂದ ಅಡ್ಮಿನ್‍ಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
Advertisement
Advertisement
ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಖಾಸಗಿ ವಾಟ್ಸಾಪ್ ಗುಂಪಿನಲ್ಲಿ ಅಭ್ಯರ್ಥಿ ಪರ ಮತ ಚಲಾಯಿಸಲು ಪ್ರೇರೇಪಿಸುವುದು ತಪ್ಪು. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಇಂತಹ ಸಂದೇಶವನ್ನು ಯಾರಾದರೂ ಸ್ಕ್ರೀನ್ ಶಾಟ್ ತೆಗೆದು ಅದನ್ನು ಚುನಾವಣಾ ಆಯೋಗದ ಅಪ್ಲಿಕೇಶನ್ ಸಿವಿಜಿಲ್ (cVigil) ಆ್ಯಪ್‍ಗೆ ಕಳುಹಿಸಿದರೆ ಆಯೋಗವು ಆ ಗುಂಪಿನ ಅಡ್ಮಿನ್‍ಗಳಿಗೆ ನೋಟಿಸ್ ನೀಡುತ್ತದೆ.
Advertisement
ಈ ನಿಯಮವು ವಾಟ್ಸಾಪ್ ಗ್ರೂಪ್‍ಗೆ ಮಾತ್ರವಲ್ಲ ಫೇಸ್‍ಬುಕ್ ಮತ್ತು ಟ್ವಿಟರ್ ಗಳಿಗೂ ಅನ್ವಯಿಸುತ್ತದೆ. ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ನಂತರ, ಚುನಾವಣಾ ರಂಗದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ. ಇದರ ಪ್ರಾಮುಖ್ಯತೆಯನ್ನು ಭಾರತದಲ್ಲಿಯೂ ತಿಳಿಯಬಹುದಾಗಿದೆ.
Advertisement
ಸಿವಿಜಿಲ್ ಆ್ಯಪ್‍ನಲ್ಲಿ 1200 ದೂರು:
ನಂದೇಡ್ ಎಂಸಿಎಂಸಿ ಮುಖ್ಯಸ್ಥ ರಾಜೇಂದ್ರ ಚವಾಣ್, ಯಾವುದೇ ಅಭ್ಯರ್ಥಿಯು ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ಕುರಿತು ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು. ಯಾರಾದರೂ ಅನುಮತಿಯಿಲ್ಲದೆ ಮಾಧ್ಯಮದಲ್ಲಿ ಪ್ರಚಾರ ಕೈಗೊಂಡರೆ ಅಭ್ಯರ್ಥಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಾಗುತ್ತದೆ. ಮಾಧ್ಯಮದಲ್ಲಿ ಹರಿಬಿಟ್ಟ ಸಂದೇಶವು ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಸಂಬಂಧಿಸಿದ್ದು ಎಂಬುದು ಮುಖ್ಯವಲ್ಲ. ಈ ಮೂಲಕ ಮಹಾರಾಷ್ಟ್ರದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಒಟ್ಟು ಸಿವಿಜಿಲ್ ಅಪ್ಲಿಕೇಶನ್‍ಗೆ 1,200 ದೂರುಗಳು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.
ನೋಟಿಸ್ ಜಾರಿಯಾಗಿರುವ 12 ವಾಟ್ಸಪ್ ಗ್ರೂಪ್‍ಗಳ ಅಡ್ಮಿನ್‍ಗಳು ತಮ್ಮ ಗ್ರೂಪ್‍ನಲ್ಲಿ ಪ್ರಚಾರವನ್ನು ನಿಲ್ಲಿಸಲು ಹಾಗೂ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಕಾರಣವನ್ನು ಒಂದು ವಾರದೊಳಗೆ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ. ಹಿರಿಯ ಅಧಿಕಾರಿಗಳು ನೋಟಿಸ್ ಪಡೆದ ಅಡ್ಮಿನ್‍ಗಳಿ ಶಿಕ್ಷೆ ವಿಧಿಸಲ್ಲ. ಆದರೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುತ್ತಾರೆ. ಒಂದು ವೇಳೆ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಅಭ್ಯರ್ಥಿಯು ಸಾಮಾಜಿಕ ಜಾಲತಾಣದಲ್ಲಿ ತನ್ನ ಖಾತೆ ಮೂಲಕ ಪ್ರಚಾರ ನಡೆಸುತ್ತಿರುವ ಬಗ್ಗೆ ತಿಳಿದಿದ್ದರೆ ಅವರನ್ನು ಚುನಾವಣಾ ಕಣದಿಂದ ವಜಾ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಕೆಲವು ಪ್ರಕರಣದಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವುದರಿಂದ ಅವರನ್ನು ಅನರ್ಹಗೊಳಿಸಬಹುದು.
ಫೇಸ್‍ಬುಕ್ ಮೇಲೆ ನಿಗಾ ಇಡಲಾಗುತ್ತಿದೆ. ಕಾಂಗ್ರೆಸ್, ಎಂಎನ್‍ಎಸ್ ಮತ್ತು ಶಿವಸೇನೆಗೆ ಸಂಬಂಧಿಸಿದ ನಾಲ್ಕು ಫೇಸ್‍ಬುಕ್ ಪುಟಗಳಿಗೆ ಅನುಮತಿಯಿಲ್ಲದೆ ಪ್ರಚಾರ ಮಾಡದಿರಲು ನೋಟಿಸ್ ಕಳುಹಿಸಲಾಗಿದೆ ಎಂದು ಮುಂಬೈ ನಗರ ಜಿಲ್ಲಾಧಿಕಾರಿ ಶಿವಾಜಿ ಜೊನಾಧಲೆ ತಿಳಿಸಿದ್ದಾರೆ.