ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra Assembly Elections) ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 48 ಅಭ್ಯರ್ಥಿಗಳನ್ನು ಪಕ್ಷ ಘೋಷಿಸಿದೆ.
ಬ್ರಹ್ಮಪುರಿಯಿಂದ ವಿಜಯ್ ವಾಡೆತ್ತಿವಾರ್, ನಾಗ್ಪುರ ಉತ್ತರದಿಂದ ನಿತಿನ್ ರಾವುತ್, ಸಂಗಮ್ನೇರ್‌ನಿಂದ ವಿಜಯ್ ಬಾಳಾಸಾಹೇಬ್ ಥೋರಟ್ ಮತ್ತು ಕರಡ್ ದಕ್ಷಿಣದಿಂದ ಪೃಥ್ವಿರಾಜ್ ಚವ್ಹಾಣ್ ಕಣದಲ್ಲಿರುವ ಪ್ರಮುಖರಾಗಿದ್ದಾರೆ.
ನಾಗ್ಪುರ ನೈರುತ್ಯದಿಂದ ಪ್ರಫುಲ್ ವಿನೋದರಾವ್ ಗುಡಧೆ, ಮಲಾಡ್ ಪಶ್ಚಿಮದಿಂದ ಅಸ್ಲಂ ಆರ್.ಶೇಖ್ ಕೂಡ ಕಣದಲ್ಲಿದ್ದಾರೆ.