ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶದ ಮತ ಎಣಿಕೆ ಆರಂಭವಾಗಿದೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮತ್ತೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳ್ತಿವೆ. ಆದರೆ, ಕಾಂಗ್ರೆಸ್ ಇದನ್ನು ನಂಬ್ತಿಲ್ಲ. ಫೋಟೋ ಫಿನಿಷ್ ಫಲಿತಾಂಶ ಹೊರಬರುವ ನಿರೀಕ್ಷೆಯನ್ನು ಹೊಂದಿದೆ. ಇಂದು ಬೆಳಗ್ಗೆ ಟ್ರೆಂಡ್ ನೋಡಿಕೊಂಡು ಗೆಲ್ಲುವ ಅಭ್ಯರ್ಥಿಗಳನ್ನು ರಕ್ಷಿಸಿಕೊಳ್ಳಲು ಹೈಕಮಾಂಡ್ ಪ್ಲಾನ್ ಮಾಡಿದೆ. ಅಗತ್ಯಬಿದ್ರೆ ಕಾಂಗ್ರೆಸ್ ವಿಜೇತರನ್ನು ಕರ್ನಾಟಕಕ್ಕೆ ಕಳಿಸ್ತೇವೆ. ರೆಸಾರ್ಟ್ ರೆಡಿ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ -ಡಿಸಿಎಂ ಸಿದ್ದರಾಮಯ್ಯನವರಿಗೆ ಸೂಚಿಸಿದೆ ಎನ್ನಲಾಗಿದೆ.
Advertisement
ಅಂಥಾದ್ದೇನಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಕಾಂಗ್ರೆಸ್ ಪೆಚ್ಚು ಮೊರೆ ಹಾಕೋದು ನಿಶ್ಚಿತ ಎಂದು ಬಿಜೆಪಿ ಲೇವಡಿ ಮಾಡಿದೆ. ಮತದಾನೋತ್ತರ ಪರಿಸ್ಥಿತಿಗಳನ್ನ ನಿಭಾಯಿಸಲು 2 ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಮಹಾರಾಷ್ಟ್ರಕ್ಕೆ ಜಿ.ಪರಮೇಶ್ವರ್ ನಿಯುಕ್ತರಾಗಿದ್ದಾರೆ. ಈ ಹೊತ್ತಲ್ಲೇ, ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಉದ್ಧವ್ ಶಿವಸೇನೆಗೆ ಬಾಗಿಲು ತೆರೆದಿದೆ ಎಂಬ ಸಂದೇಶವನ್ನು ಬಿಜೆಪಿ ನೀಡಿದೆ. ಇದು ಕಾಂಗ್ರೆಸ್‌ಗೆ ಇನ್ನಷ್ಟು ದಿಗಿಲು ತಂದಿದೆ. ಡಿಸಿಎಂ ಫಡ್ನಾವೀಸ್ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.
Advertisement
ಉದ್ಧವ್ ಠಾಕ್ರೆ ಕೂಡ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಇನ್ನು, ಜಾರ್ಖಂಡ್‌ನಲ್ಲಿ ಯಾರೂ ಬೇಕಿದ್ರೂ ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್‌ಗಳ ಸಮೀಕ್ಷೆಗಳು ಹೇಳ್ತಿವೆ.
Advertisement
ಮಹಾರಾಷ್ಟ್ರ ಎಲೆಕ್ಷನ್
ಒಟ್ಟು ಕ್ಷೇತ್ರ – 288
* ಸರಳ ಬಹುಮತ – 145
* ಮತದಾನ ಪ್ರಮಾಣ – 62.05%
Advertisement
ಮಹಾರಾಷ್ಟ್ರ ಎಲೆಕ್ಷನ್.. ಪ್ರಮುಖಾಂಶ
* ಮಹಾಯುತಿ ಒಕ್ಕೂಟದ ಮಾ.ಧ.ವ ಸೂತ್ರ
(ಮರಾಠೇತರ ಒಬಿಸಿ ಮತಗಳ ಗುರಿಯಾಗಿಸಿದ್ದ ಬಿಜೆಪಿ. ಮಾಧವ ಫಾರ್ಮುಲಾ – ಮಾ-ಮಾಲಿ, ಧ-ಧಂಗರ್, ವ-ವಂಜಾರಿ ಸಮುದಾಯ. ಇವು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿತ್ತು)
* ಮರಾಠವಾಡ ಪ್ರಾಂತ್ಯದ ಮೇಲೆ ಎಂವಿಎ ಕಣ್ಣು
(ಲೋಕಸಭೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಕೈ ಹಿಡಿದಿದ್ದ ಮರಾಠವಾಡ ಪ್ರಾಂತ್ಯ)
* 76 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನೇರಾನೇರ ಫೈಟ್
* ನಿರ್ಣಾಯಕವಾದ ವಿದರ್ಭ ಪ್ರಾಂತ್ಯ(62 ಸೀಟ್)ದ ಮೇಲೆ ಬಿಜೆಪಿ ಕಣ್ಣು
(ಸರ್ಕಾರ ರಚನೆಗೆ ನಿರ್ಣಾಯಕ. ಬಿಜೆಪಿಯ ಹಿಡಿತ ಮುಂದುವರಿಯುತ್ತಾ..)
* ಕಾಂಗ್ರೆಸ್‌ನ ಗ್ಯಾರಂಟಿಗಳು ವರ್ಸಸ್ ಬಿಜೆಪಿಯ ಲಾಡ್ಲಿ ಬಹೆನ್ ಯೋಜನೆ
* ರೈತರು, ಗ್ರಾಮಾಂತರ ಪ್ರದೇಶದ ಮತದಾರರು..
* ಕಣದಲ್ಲಿ ಬಿವಿಎ.. ಯಾವ ಕೂಟಕ್ಕೆ ಲಾಭ.. ಯಾವ ಕೂಟಕ್ಕೆ ನಷ್ಟ?
ಜಾರ್ಖಂಡ್ ಎಲೆಕ್ಷನ್ – ಇಂದು ಫಲಿತಾಂಶ
* ಒಟ್ಟು ಸ್ಥಾನ – 81
* ಮ್ಯಾಜಿಕ್ ನಂಬರ್ – 41
* ಮತದಾನ ಪ್ರಮಾಣ – 68.01%
ಜಾರ್ಖಂಡ್ ಎಲೆಕ್ಷನ್.. ಪ್ರಮುಖಾಂಶ
* ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ಜಾರ್ಖಂಡ್
* ಇಂಡಿ ಒಕ್ಕೂಟದ ಗ್ಯಾರಂಟಿ ವರ್ಸಸ್ ಬಿಜೆಪಿ ಸಂಕಲ್ಪ
* ಜೆಎಂಎಂಗೆ ಕಾಂಗ್ರೆಸ್, ಆರ್‌ಜೆಡಿ, ಎಡಪಕ್ಷಗಳು ಸಾಥ್
* ಇಡಿಯಿಂದ ಸೋರೆನ್ ಬಂಧನ ಪ್ರಕರಣ.. ಅನುಕಂಪದ ಅಲೆ ನಿರೀಕ್ಷೆ
* ಪ್ರಧಾನಿ ನರೇಂದ್ರ ಮೋದಿಯನ್ನೇ ನೆಚ್ಚಿಕೊಂಡಿರುವ ಬಿಜೆಪಿ
* ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದ ಹುಮ್ಮಸ್ಸು
* ಅದೇ ಫಲಿತಾಂಶ ವಿಧಾನಸಭೆ ಚುಣಾವಣೆಯಲ್ಲಿ ಬರುವ ವಿಶ್ವಾಸ