ನಾಗ್ಪುರ ಕಾರ್ಖಾನೆಯಲ್ಲಿ ಭೀಕರ ಸ್ಫೋಟಕ್ಕೆ 9 ಮಂದಿ ಸಾವು – ಹಲವರಿಗೆ ಗಾಯ

Public TV
1 Min Read
Maharashtra

ಜೈಪುರ: ಮಹಾರಾಷ್ಟ್ರದ (Maharashtra) ನಾಗ್ಪುರ ಕಂಪನಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 9 ಜನ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆ 9:30 ಗಂಟೆ ವೇಳೆಗೆ ಬಜಾರ್‌ಗಾಂವ್ ಪ್ರದೇಶದಲ್ಲಿರುವ ಸೋಲಾರ್ ಇಂಡಸ್ಟ್ರೀಸ್ (Solar Industrie) ಇಂಡಿಯಾ ಲಿಮಿಟೆಡ್‌ನಲ್ಲಿ ಸ್ಫೋಟ ಸಂಭವಿಸಿದೆ. ಸ್ಪೋಟದಲ್ಲಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಮೋದಿ ತವರಲ್ಲಿ Surat Diamond Bourse – ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ

ಕಲ್ಲಿದ್ದಲು ಸ್ಫೋಟಗೊಳಿಸಲು (Coal Blasting) ಸ್ಫೋಟಕಗಳನ್ನು ಪ್ಯಾಕ್ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದೆ. ಇದನ್ನೂ ಓದಿ: ವೈದ್ಯ, ಆರ್ಮಿ ಡಾಕ್ಟರ್‌, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ.. ನಾನಾ ವೇಶ – ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ

ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್‌ ಕಂಪನಿಯು ದೇಶದ ರಕ್ಷಣಾ ಇಲಾಖೆಗೆ ಸ್ಫೋಟಕಗಳು ಮತ್ತು ಇತರ ರಕ್ಷಣಾ ಸಾಧನಗಳ ಪೂರೈಕೆಯೊಂದಿಗೆ ವ್ಯವಹರಿಸುತ್ತಿರುವುದಾಗಿ ತಿಳಿದುಬಂದಿದೆ.

ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಂಪನಿ ಆವರಣದ ಸುತ್ತಲೂ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಅಂಬುಲೆನ್ಸ್‌ಗಳೂ ಸ್ಥಳಕ್ಕಾಗಿಮಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ರಾಗಾಗೆ ಮತ್ತೆ ಸಂಕಷ್ಟ – ಜ.6ರಂದು ವಿಚಾರಣೆಗೆ ಹಾಜರಾಗುವಂತೆ UP ಕೋರ್ಟ್‌ನಿಂದ ಸಮನ್ಸ್‌ 

Share This Article