ಮುಂಬೈ: ಮಹಾರಾಷ್ಟ್ರ ಸರ್ಕಾರದ ಆಡಳಿತ ಕೇಂದ್ರ ಮಂತ್ರಾಲಯಕ್ಕೆ (Maharashtra Mantralaya) ಬೆದರಿಕೆ ಕರೆ ಮಾಡಿದ್ದ 61 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದಾರೆ.
ಪ್ರಕಾಶ್ ಕಿಶನ್‌ಚಂದ್ ಖೇಮಾನಿ ಬಂಧಿತ ವ್ಯಕ್ತಿ. ಮಂತ್ರಾಲಯಕ್ಕೆ ಕರೆ ಮಾಡಿ ಎರಡು ದಿನದಲ್ಲಿ ಭಯೋತ್ಪಾದಕ ದಾಳಿ (Terror Attack) ನಡೆಯಲಿದೆ ಎಂದು ಹೇಳಿದ್ದ. ಇದನ್ನೂ ಓದಿ: ಮತ್ತೆ ವಿದೇಶ ಪ್ರವಾಸ- ಕಾಂಬೋಡಿಯಾಗೆ ತೆರಳಿದ ಮಾಜಿ ಸಿಎಂ ಹೆಚ್‍ಡಿಕೆ
ಸೋಮವಾರ ರಾತ್ರಿ 10 ಗಂಟೆಗೆ ಫೋನ್ ಮೂಲಕ ಬೆದರಿಕೆ ಬಂದಿದೆ. ಈ ವಿಚಾರವನ್ನು ನಿಯಂತ್ರಣ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕರೆಯ ಜಾಡು ಹಿಡಿದ ಪೊಲೀಸರು ಈಗ ವ್ಯಕ್ತಿಯನ್ನು ಬಂಧಿಸಿ ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.
Web Stories